July 30, 2025

Newsnap Kannada

The World at your finger tips!

dl

ಡಿಎಲ್ ಬೇಕಾ? ಹಾಗಿದ್ದರೆ ಕಾಯಬೇಕು 90 ದಿನ

Spread the love

ಚಾಲನಾ ರಹದಾರಿ ಪತ್ರವನ್ನು ಪಡೆಯಲು ಅರ್ಜಿ‌ ಇನ್ನುಮುಂದೆ‌ ಕಡ್ಡಾಯವಾಗಿ 90 ದಿನ ಕಾಯಬೇಕು ಎಂದು ಸಾರಿಗೆ ಇಲಾಖೆ ಹೇಳಿದೆ.

ಈ ಮೊದಲು ಆನ್‌ಲೈನ್ ಮೂಲಕ ಚಾಲನಾ ರಹದಾರಿ ಪತ್ರ ಸಲ್ಲಿಸಿದ್ದರೆ 30 ದಿನ ಕಾಯಬೇಕಿತ್ತು. ಕೋವಿಡ್ ಕಾರಣದಿಂದ ಸಾಕಷ್ಟು ಅರ್ಜಿಗಳು ವಿತರಣೆಯ ಪ್ರಕ್ರಿಯೆಯಲ್ಲಿ ಇರುವುದರಿಂದ ಸಾರಿಗೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಕಲಿಕಾ ಹಾಗೂ ಅನುಜ್ಞಾ ಪತ್ರ ಪಡೆಯಲು ಆನ್‌ಲೈನ್ ಅರ್ಜಿ‌ ಸಲ್ಲಿಕೆ ಮೊದಲು ಮಾಡಿದ್ದಾಗ 30 ದಿನ ಕಾಯಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಸಾವಿರಾರು ಕಲಿಕಾ ಹಾಗೂ ಅನುಜ್ಞಾ ಪತ್ರಗಳು ಬಾಕಿ ಇವೆ. ಈ ಅರ್ಜಿಗಳ ಸಮರ್ಪಕ ವಿಲೇವಾರಿ ಮಾಡಲು, ಅರ್ಜಿಗಳಿಗೆ 90 ದಿನಗಳವರೆಗೆ ಕಾಲಾವಕಾಶ ವಿಸ್ತರಣೆ ಮಾಡಲಾಗಿದೆ.

ಈ ಕುರಿತು ಆದೇಶ ಹೊರಡಿಸಿರುವ ಸಾರಿಗೆ ಇಲಾಖೆ ‘ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಚಾಲನಾ ಪರವಾನಗೆಗಾಗಿ ಆನ್‌ಲೈನ್ ಮೂಲಕ ಬುಕ್ ಮಾಡಿದ ಅಭ್ಯರ್ಥಿಗಳಿಗೆ 90 ದಿನಕ್ಕೆ ಮೀರದಂತೆ ಸೇವೆ ನೀಡಬೇಕು’ ಎಂದು‌ ಉಲ್ಲೇಖಿಸಿದೆ

error: Content is protected !!