ವಿಜ್ಞಾನ ವಿಭಾಗದ ಬಹುತೇಕ ಎಲ್ಲಾ ಜಿಲ್ಲೆಗಳ ಉತ್ತರಪತ್ರಿಕೆಗಳ ಮೌಲ್ಯಮಾಪನ ರಾಜಧಾನಿ ಬೆಂಗಳೂರಿನಲ್ಲಿ ಮಂದಗತಿಯಲ್ಲಿ ನಡೆದಿರುವ ಕಾರಣಕ್ಕಾಗಿ ದ್ವಿತೀಯ ಪಿಯು ಫಲಿತಾಂಶ ಜೂನ್ ಅಂತ್ಯಕ್ಕೆ ಪ್ರಕಟಿಸುವ ಸಾಧ್ಯತೆ ಇದೆ.
ವಾಣಿಜ್ಯ, ಕಲಾ ವಿಭಾಗದ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳ ಮೌಲ್ಯಮಾಪನ ಉಡುಪಿ, ದಕ್ಷಿಣ ಕನ್ನಡ ಮೊದಲಾದ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಕಲಾ ವಿಭಾಗದ ಮೌಲ್ಯಮಾಪನ ಅಂತಿಮ ಹಂತದಲ್ಲಿದೆ ಇನ್ನೆರಡು ದಿನದಲ್ಲಿ ಪೂರ್ಣಗೊಳ್ಳಲಿದೆ. ವಾಣಿಜ್ಯ ವಿಭಾಗದ ಮೌಲ್ಯಮಾಪನವೂ ಈ ವಾರದೊಳಗೆ ಮುಗಿಯಲಿದೆ.
ಮೌಲ್ಯಮಾಪನ ಮುಗಿದ ಅನಂತರ ಫಲಿತಾಂಶ ಪ್ರಕಟಿಸಲು ಸಿದ್ಧತೆಗಾಗಿ ಕನಿಷ್ಠ 10 ದಿನಗಳು ಬೇಕು. ವಿಜ್ಞಾನ ವಿಭಾಗದಲ್ಲಿ ಉತ್ತರಪತ್ರಿಕೆಗಳ ಸಂಖ್ಯೆಯೂ ಹೆಚ್ಚಿದೆ ಮೌಲ್ಯಮಾಪಕರ ಕೊರತೆ ಇರುವುದರಿಂದ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ 15 ದಿನ ಬೇಕು. ಈ ಕಾರಣಕ್ಕಾಗಿ ಫಲಿತಾಂಶ ವಿಳಂಬವಾಗಬಹುದು ಎನ್ನಲಾಗುತ್ತಿದೆ.
ಇದನ್ನು ಓದಿ : UPSC ಸಿವಿಲ್ 2021 ಫೈನಲ್ ಫಲಿತಾಂಶ :ಟಾಪ್ ಮೂರು ಸ್ಥಾನ ಮಹಿಳೆಯರದ್ದೆ -ರಾಜ್ಯದ 24 ಮಂದಿ ಆಯ್ಕೆ : ಪಟ್ಟಿ ನೋಡಿ
ಕಲಾ ಮತ್ತು ವಾಣಿಜ್ಯ ವಿಭಾಗದ ಉತ್ತರ ಪತ್ರಿಕೆಯ ಮೌಲ್ಯಮಾಪನಕ್ಕೆ ಸರ್ಕಾರಿ ಮತ್ತು ಅನುದಾನಿತ ಪ.ಪೂ.ಕಾಲೇಜುಗಳಲ್ಲಿ ಉಪನ್ಯಾಸಕರು ಹೆಚ್ಚಿದ್ದಾರೆ. ಆದರೆ ವಿಜ್ಞಾನ ವಿಭಾಗಕ್ಕೆ ಖಾಸಗಿ ಪ.ಪೂ. ಕಾಲೇಜುಗಳ ಉಪನ್ಯಾಸಕರನ್ನು ಬಳಸಿಕೊಳ್ಳುವುದು ಅನಿವಾರ್ಯ. ಇವರಲ್ಲಿ ಬಹುತೇಕ ಮಂದಿ ಸಿಇಟಿ, ನೀಟ್ ಇತ್ಯಾದಿ ಕೋಚಿಂಗ್‌ನಲ್ಲಿ ತೊಡಗಿಕೊಂಡಿರುವುದರಿಂದ ಮೌಲ್ಯಮಾಪನಕ್ಕೆ ಸೂಕ್ತ ಸಮಯದಲ್ಲಿ ಹಾಜರಾಗುತ್ತಿಲ್ಲ. ಹೀಗಾಗಿ ವಿಳಂಬವಾಗುತ್ತಿದೆ.
ಮೌಲ್ಯಮಾಪನಕ್ಕೆ ಹಾಜರಾಗದ ಸರಕಾರಿ ಅಥವಾ ಅನುದಾನಿತ ಪಿಯು ಕಾಲೇಜುಗಳ ಉಪನ್ಯಾಸಕರು ಅಥವಾ ಕಾಲೇಜುಗಳ ಮೇಲೆ ಇಲಾಖೆ ನೇರ ಕ್ರಮ ಕೈಗೊಳ್ಳಲಿದೆ.
- ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
- ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
- ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!
- ಮಾದಕ ವಸ್ತುಗಳ ಅಕ್ರಮ ಮಾರಾಟ: ಮೂವರು ಆರೋಪಿಗಳು ಬಂಧನ
- ಕೆನಡಾವನ್ನು ಅಮೆರಿಕಾದ 51ನೇ ರಾಜ್ಯವನ್ನಾಗಿ ಮಾಡಲು ಟ್ರಂಪ್ ಆರ್ಥಿಕ ಒತ್ತಡದ ಬೆದರಿಕೆ
More Stories
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!