January 11, 2025

Newsnap Kannada

The World at your finger tips!

WhatsApp Image 2022 05 27 at 10.54.34 PM

ಇಬ್ಬರು ಯುವ ಪತ್ರಕರ್ತರು ಹೃದಯಾಘಾತದಿಂದ ಸಾವು: KUWJ ಅಧ್ಯಕ್ಷರ ಸಂತಾಪ

Spread the love

ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರಿಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೂರ್ಯ ಕುಮಾರ್( 29) ಹಾಗೂ ಹರೀಶ್ ಹುಲಿಕಟ್ಟೆ (29) ಸಾವನ್ನಪ್ಪಿದವರು.

ವಿಜಯ ಕರ್ನಾಟಕ ಡಿಸೈನರ್ ಸೂರ್ಯಕುಮಾರ್ (29) ಇಂದು ಬೆಳಿಗ್ಗೆ ಹೃದಯಾಘಾತಕ್ಕೊಳಗಾಗಿ ನಿಧನರಾದರು ಪತ್ನಿ, ತಂದೆ ತಾಯಿ ಮತ್ತು ಸಹೋದರಿಯರು ಹಾಗೂ ಅಪಾರ ಸ್ನೇಹಿತರನ್ನು ಅಗಲಿದ್ದಾರೆ. ಈ ಹಿಂದೆ ವಿಜಯವಾಣಿ ಮತ್ತು ಸಿನಿಮಾ ಮಾಸಿಕಗಳಿಗೆ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದರು. ಮಂಡ್ಯ ಜಿಲ್ಲೆಯ ಬಸರಾಳ ಹತ್ತೀರದ ಗಿಡ್ಡೇಗೌಡನ ಕೊಪ್ಪಲಿನ ಸೂರ್ಯ ಕುಮಾರ್ ಸಾವು ನಿಜಕ್ಕೂ ಅರಗಿಸಿಕೊಳ್ಳಲಾರದ ಸಂಗತಿ.

ಹರೀಶ್ ಹುಲಿಕಟ್ಟಿ ನಿಧನ:

ಕನ್ನಡ ಪ್ರಭ ಪತ್ರಿಕೆ ಉಪಸಂಪಾದಕ ಹರೀಶ್ ಹುಲಿಕಟ್ಟೆ (29) ಹೃದಯಾಘಾತದಿಂದ ಮೃತಪಟ್ಟ ಸುದ್ದಿ ಬರಸಿಡಿಲಿನಂತೆ ಬಂದೆರಗಿತು.
ಪತ್ನಿ, ಕುಟುಂಬ, ಸ್ನೇಹಿತರನ್ನು ಅಗಲಿದ್ದಾರೆ. ಇಬ್ಬರು ಇನ್ನೂ ಚಿರಯುವಕರು. ಬದುಕಿ ಬಾಳಬೇಕಾದವರು ಇಷ್ಟು ಬೇಗ‌ ಮೃತಪಟ್ಟರೆ ಏನು ಹೇಳುವುದು?

ಇಬ್ಬರು ಪತ್ರಕರ್ತರ ಸಾವಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕಂಬನಿ ಮಿಡಿದಿದ್ದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ. ಇಬ್ಬರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!