January 29, 2026

Newsnap Kannada

The World at your finger tips!

srh vs

ಪಂಜಾಬ್‌ಗೆ ಗೆಲುವಿನ ಕಿರೀಟ; ಧವನ್ ಶ್ರಮ ವ್ಯರ್ಥ

Spread the love

ಐಪಿಎಲ್ 20-20ಯ 37ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಡೆಲ್ಲಿ‌ ಕ್ಯಾಪಿಟಲ್ಸ್ ತಂಡ‌ದ ವಿರುದ್ಧ 5 ವಿಕೆಟ್‌ಗಳ ಅಂತರದಿಂದ ಗೆದ್ದಿತು.

ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡಿಸಿ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಡಿಸಿ ತಂಡದಿಂದ ಆರಂಭಿಕ ಆಟಗಾರರಾಗಿ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಮೈದಾನಕ್ಕಿಳಿದರು. ಶಾ ಅವರ ಆಟದ ಆರಂಭ ಅತ್ಯಂತ ಸಾಧಾರಣವಾಗಿದ್ದರೂ, ಧವನ ಅವರ ಆರಂಭ ಅದ್ಭುತವಾಗೊತ್ತು. ಶಿಖರ್ ಧವನ್ 61 ಎಸೆತಗಳಿಗೆ 106 ರನ್ ಗಳಿಸಿದರೆ, ಶಾ 11 ಎಸೆತಗಳಿಗೆ 7 ರನ್ ಮಾತ್ರ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಮೈದಾನಕ್ಕಿಳಿದ ಯಾರ ಆಟವೂ ಅಷ್ಟೊಂದು ಆಕರ್ಷಕವಾಗಿರಲಿಲ್ಲ. ಡಿಸಿ ತಂಡ‌ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್‌ಗಳ ಸಾಧಾರಣ ಗಳಿಕೆ ಮಾಡಿತು.

ಪಂಜಾಬ್ ತಂಡ ಉತ್ಸಾಹದಿಂದಲೇ ಡಿಸಿ ಸವಾಲನ್ನು ಸ್ವೀಕಾರ ಮಾಡಿತು. ತಂಡದಿಂದ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೈದಾನಕ್ಕಿಳಿದರು. ರಾಹುಲ್ 11 ಬಾಲ್‌ಗಳಿಗೆ 15 ರನ್ ಹಾಗೂ 9 ಬಾಲ್‌ಗಳಿಗೆ 5 ರನ್ ಗಳಿಕೆ ಮಾಡಿದರು. ಆಟವನ್ನು‌ ಇಂದು ನಿಜವಾಗಿ ಗೆಲ್ಲಿಸಿದ್ದು ಎನ್. ಪೂರನ್ ಮತ್ತು ಜಿ. ಮ್ಯಾಕ್ಸ್‌ವೆಲ್ ಅವರ ಆಟ. ಪೂರನ್ 28 ಬಾಲ್‌ಗಳಿಗೆ 53 ರನ್‌ ಹಾಗೂ ಮ್ಯಾಕ್ಸ್‌ವೆಲ್ 24 ಎಸೆತಗಳಿಗೆ 32 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪಾಲು ಹಂಚಿಕೊಂಡರು. ಪಂಜಾಬ್ ತಂಡ 19 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.

error: Content is protected !!