January 30, 2026

Newsnap Kannada

The World at your finger tips!

Prime Minister , Hubballi , Visit

Modi to Hubballi on January 12: Preparations for the rush ಜನವರಿ 12ರಂದು ಹುಬ್ಬಳ್ಳಿಗೆಮೋದಿ: ಭರದ ಸಿದ್ಧತೆ

ಲಾಕ್‌ಡೌನ್ ಹೋಗಿದೆ; ಕೊರೋನಾ ಹೋಗಿಲ್ಲ- ಪ್ರಧಾನಿ ‌ಮೋದಿ

Spread the love

ಲಾಕ್ ಡೌನ್ ಹೋಗಿದೆ. ಕೊರೋನಾ ಹೋಗಿಲ್ಲ ಎಂದು ಪ್ರಧಾನಿ ಮೋದಿ
ಮಂಗಳವಾರ ಸಂಜೆ ದೇಶದ ಜನರನ್ನುದ್ದೇಶಿಸಿ‌ ಮಾಡಿದ ಭಾಷಣದ ಪ್ರಮುಖ ಅಂಶ.

ಅನ್‌ಲಾಕ್ 2ರ ನಂತರ ಮೊದಲ ಬಾರಿಗೆ ಮೋದಿ‌ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದಾಗ ಕೊರೋನಾ ಕುರಿತು ಹೇಳಿದರು. ಭಾಷಣದ ಸಂದರ್ಭದಲ್ಲಿ‌ ಲಾಕ್‌ಡೌನ್ ಹೋಗಿದೆ, ಕೋರೋನಾ ಅಲ್ಲ ಎಂದು ಹೇಳಿದರು.

  1. ಕೊರೋನಾ ದೇಶದಿಂದ ಇನ್ನೂ ಹೋಗಿಲ್ಲ. ಎಚ್ಚರಿಕೆಯಿಂದಿರಿ.
  2. ಕೊರೋನಾ ಅಪಾಯಕಾರಿ‌ ಅಲ್ಲ ಎಂದು ತಿಳಿಯಬೇಡಿ. ಮಾಸ್ಕ್ ಕಡ್ಡಾಯವಾಗಿ‌ ಧರಿಸಿ. ಸಾಮಾಜಿಕ ಅಂತರ, ದೈಹಿಕ ಅಂತರ ಕಾಪಾಡಿ.
  3. ಔಷಧಿ ಸಿಗುವ ತನಕ ನಾವು ಮೈ ಮರೆಯೋದು ಬೇಡ.
  4. ಕೊರೋನಾ ಲಸಿಕೆ ಕಂಡು ಹಿಡಿಯಲು ಅನೇಕ‌ ಕಂಪನಿಗಳು ಮುಂದಾಗಿವೆ. ಅವುಗಳಲ್ಲಿ‌ ಕೆಲವು ಲಸಿಕೆಗಳು ಅಂತಿಮ‌ ಹಂತದ ಪರೀಕ್ಷೆಯಲ್ಲಿವೆ.
  5. ಬಹಳಷ್ಟು ಜನ‌ ಕೊರೋನಾ ಬಗ್ಗೆ ಮೈ ಮರೆಯುತ್ತಿದ್ದಾರೆ‌. ಅದು ಬೇಡ.
  6. ಕೊರೋನಾ ಬಗ್ಗೆ ಜಾಗೃತಿ‌ ಮೂಡಿಸಲು ಮಾಧ್ಯಮಗಳು ಸಹಕರಿಸಬೇಕು.
  7. ಮುಂದಿನ ನಾಲ್ಕು ತಿಂಗಳು ಕೊರೋನಾ ನಿಯಂತ್ರಣಕ್ಕೆ ಅತ್ಯಂತ ನಿರ್ಣಾಯಕ ದಿನಗಳಾಗಿವೆ. ಹಾಗಾಗಿ‌ ನಾವು ಇನ್ನಿಲ್ಲದಷ್ಟು ಜಾಗರೂಕತೆಯಿಂದ ಇರಬೇಕು.
  8. ದೇಶದಲ್ಲಿ 90,000 ಸಾವಿರ‌ ಚಿಕಿತ್ಸಾ ಹಾಸಿಗೆಗಳು, 12 ಕ್ವಾರಂಟೈನ್ ಕೇಂದ್ರಗಳಿವೆ. 2,000 ಸಾವಿ‌ರ ಪ್ರಯೋಗಾಲಯಗಳಿವೆ. ಹಾಗಾಗಿ ಕೊರೋನಾಗೆ ಭಯ ಬೇಡ. ಜಾಗೃತೆ ಇರಲಿ.
  9. ಬ್ರೆಜಿಲ್, ಅಮೇರಿಕಾಗೆ ಹೋಲಿಸಿದರೆ ನಮ್ಮ ದೇಶ ಉತ್ತಮ ಸ್ಥಿತಿಯಲ್ಲಿದೆ.
  10. ಇನ್ನು ಕೆಲವೇ ದಿನಗಳಲ್ಲಿ‌ ಕೊರೊನೊಕ ಟೆಸ್ಟ್‌ಗಳ ಸಂಖ್ಯೆ 10 ಕೋಟಿ ದಾಟುವುದು.
  11. ಎಲ್ಲ ಹಬ್ಬಗಳು ಒಟ್ಟಿಗೆ ಬರುತ್ತವೆ.‌ ಎಚ್ಚರಿಕೆಯಿಂದ ಹಬ್ಬ ಆಚರಿಸೋಣ. ಸಂತಸ ಎಚ್ಚರಿಕೆ‌‌ ಇದ್ದರೆ ಮಾತ್ರ ನಮಗೆ ಉಳಿವು. ಇಲ್ಲದಿಂದರೆ ಅಪಾಯ ಖಚಿತ.
  12. ಪ್ರಪಂಚದ ಯಾವುದೇ ಭಾಗದಲ್ಲಿ ಕೊರೋನಾ ಲಸಿಕೆ ಕಂಡುಹಿಡಿದರೂ ಸಹ ಆದಷ್ಟು ಬೇಗ ಭಾರತಕ್ಕೆ ಅದನ್ನು ತರಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
  13. ಕೊರೋನಾ ಲಸಿಕೆ‌ ಸಿಗುವ ತನಕ‌ ಮೈಮರೆಯವುದು ಬೇಡ ಎಂದು ದೇಶದ ಜನರಲ್ಲಿ‌ ಮೋದಿ‌ ಮನವಿ.
error: Content is protected !!