ಜಾತಿ ಸಮೀಕ್ಷೆ ವರದಿಗೆ ಕುಮಾರಸ್ವಾಮಿ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕೆಂಡಾಮಂಡಲವಾಗಿರುವ ಹೆಚ್‌ಡಿಕೆ ‘ನನ್ನನ್ನು ಪದೇ ಪದೇ ಕೆಣಕಬೇಡಿ’ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ‘ಪದೇ ಪದೇ ನನ್ನನ್ನ ಕೆಣಕಬೇಡಿ. ಎಚ್ಚರಿಕೆ ಕೊಡ್ತಿದ್ದೇನೆ. ರಾಜಕೀಯದ ತೆವಲು ತೀರಿಸಿಕೊಳ್ಳಲು ಹೊರಟಿದ್ದೀರ. ಇದು ಬಹಳ ದಿನ ನಡೆಯೊಲ್ಲ. ರಾಜಕೀಯ ತೆವಲಿಗೆ ಏನೋನೊ ಮಾತಾಡೋದು ಬೇಡಾ. ಸಿದ್ದರಾಮಯ್ಯಗೆ ನಿನ್ನೆ ರಾತ್ರಿ ಕನಸ್ಸು ಬಿತ್ತಂತಾ? ನನ್ನ ವಿರುದ್ದ ಟೀಕೆ ಮಾಡೋಕೆ ಬೇರೆ ವಿಚಾರಗಳು ಇಲ್ಲ. ಜನರನ್ನು ಮರಳು ಮಾಡೋಕೆ ಬತ್ತಳಿಕೆಯಲ್ಲಿ ಯಾವುದೇ ಅಸ್ತ್ರಗಳು ಇಲ್ಲ. ನನ್ನ ಬಗ್ಗೆ ಮಾತಾಡುವಾಗ ಎಚ್ಚರಿಕೆ ಇರಲಿ. ನಿಮ್ಮ ತೆವಲಿಗೆ ಜನರನ್ನು ನನ್ನ ವಿರುದ್ದ ಎತ್ತಿಕಟ್ಟಿದ್ದೀರಾ ಎಂಬುದು ಗೊತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ, ಸಿದ್ದರಾಮಯ್ಯ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದರು. ಆಗ ಸಮೀಕ್ಷೆಯ ಬಗ್ಗೆ ಮಾತನಾಡದೇ ಈಗ ಯಾಕೆ ಮಾತನಾಡುತ್ತಿದ್ದಾರೆ? ಕ್ಯಾಬಿನೆಟ್‌ನಲ್ಲಿ ಒಂದೂ ದಿನವೂ ಇದರ ಬಗ್ಗೆ ಚರ್ಚೆ ಮಾಡಿಲ್ಲ. ನಾನು ಜನಬೆಂಬಲದಿಂದ ಮತ್ತೆ ಗೆದ್ದು ಬರುತ್ತೇನೆ ಎಂದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಹಾಗಾಗಿ ಬಿಜೆಪಿಯನ್ನು ಬಿಟ್ಟು ಜೆಡಿಎಸ್ ನಾಶ ಮಾಡಲು ಹೊರಟಿದ್ದಾರೆ’ ಎಂದು ಗುಡುಗಿದರು.
ಬಿಎಸ್‌ವೈ ಪುತ್ರ ವಿಜಯೇಂದ್ರರ ಬಗ್ಗೆಯೂ ಕಿಡಿ ಕಾರಿರುವ ಹೆಚ್‌ಡಿಕೆ ‘ಶಿರಾದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಪಾಪದ ಹಣದಿಂದ ಯುವಕರಿಗೆ ಕುಡಿಸಿ ರಸ್ತೆಯ ಮೇಲೆ ಮಲಗಿಸಿದ್ದಾರೆ. ಅದೇ ಹಣವನ್ನು ನೆರೆ ಸಂತ್ರಸ್ತರಿಗೆ ನೀಡಿದರೆ ಸಹಾಯವಾಗುತ್ತದೆ. ನಾನು ನೆರೆ ಪೀಡಿತ ಪ್ರದೇಶಗಳ ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಅವರಿಗೆ ಅಗತ್ಯ ಸಾಮಾಗ್ರಿಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದರು
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ