ASIA BOOK OF RECORD ಪ್ರಶಸ್ತಿ ಮುಡಿಗೇರಿಸಿಕೊಂಡ ಹಾಸನದ ಯುವತಿ

Team Newsnap
1 Min Read

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಗ್ರಾಮದ ಮೇಘನಾ ಅವರು ತಮ್ಮ ಚಿತ್ರಕಲೆಯ ಪ್ರತಿಭೆಗಾಗಿ ASIA BOOK OF RECORD ಮತ್ತು INDIA BOOK OF RECORD ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಲಾಕ್‌ಡೌನ್ ಸಂದರ್ಭದಲ್ಲಿ‌ ಪ್ರಪಂಚದಾದ್ಯಂತ ಜನ ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಮೇಘನಾ ಅವರು ಕೊರೊನಾ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಭಿನ್ನವಾಗಿ ತನ್ನ ಚಿತ್ರ ಬಿಡಿಸಿ ಲಂಡನ್​ನಲ್ಲಿ ನಡೆಯುತ್ತಿರುವ ಚಿತ್ರಕಲಾ ಸ್ಪರ್ಧೆಗೆ ಕಳುಹಿಸಿಕೊಟ್ಟಿದ್ದಾಳೆ.

ಕೇವಲ 50 ಸೆಕೆಂಡ್‌ಗಳಲ್ಲಿ ತಿರುವು ಮುರುವಾಗಿ ಪೆನ್ಸಿಲ್ ಶೇಡ್‌ನಲ್ಲಿ ಗಣೇಶನ ಚಿತ್ರವನ್ನು ಬಿಡಿಸಿ. ದಾಖಲೆ ಮಾಡಿರುವ ಮೇಘನಾ ASIA BOOK OF RECORD ಮತ್ತು INDIA BOOK OF RECORD ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಸದ್ಯ ಫಾರ್ಮಸಿ ಓದುತ್ತಿರುವ ಮೇಘನಾ ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ, ಪ್ರಧಾನಿ ನರೇಂದ್ರ ಮೋದಿ, ಇತ್ತೀಚಿಗೆ ನಿಧನರಾದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಂತಹ ಹಲವು ಸಾಧಕರ ಚಿತ್ರಗಳನ್ನು ಬಿಡಿಸಿದ್ದಾರೆ.

Share This Article
Leave a comment