December 18, 2024

Newsnap Kannada

The World at your finger tips!

WhatsApp Image 2022 05 17 at 10.16.01 AM

ಬಂಧಿತ ಐಎಎಸ್ ಅಧಿಕಾರಿ ಜೊತೆ ಅಮಿತ್ ಶಾ ಫೋಟೊ ಶೇರ್ – ನಿರ್ದೇಶಕನ ವಿರುದ್ಧ FIR

Spread the love

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಬಂಧಿಸಿರುವ ಜಾರ್ಖಂಡ್‌ನ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇರುವ ಫೋಟೋ ಹಂಚಿಕೊಂಡಿದ್ದಕ್ಕಾಗಿ ಗುಜರಾತ್ ಪೊಲೀಸರು ಚಲನಚಿತ್ರ ನಿರ್ಮಾಪಕ ಅವಿನಾಶ್ ದಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


ಅವಿನಾಶ್ ದಾಸ್ (46) ಅವರು ಮೇ 8 ರಂದು ಟ್ವಿಟ್ಟರ್‌ನಲ್ಲಿ ಅಮಿತ್ ಶಾ ಅವರು ಜಾರ್ಖಂಡ್ ಕೇಡರ್ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರ ಜೊತೆ ಇರುವ ಫೋಟೊವನ್ನು ಹಂಚಿಕೊಂಡಿದ್ದರು ಎಂದು ಅಹಮದಾಬಾದ್ ಪೊಲೀಸ್ ಇನ್ಸ್‌ಪೆಕ್ಟರ್‌ ಎಚ್.ಎಂ.ವ್ಯಾಸ್ ಹೇಳಿದ್ದಾರೆ. 

ಪೂಜಾ ಸಿಂಘಾಲ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ (ಜಾರಿ ನಿರ್ದೇಶನಾಲಯ) ಬಂಧಿಸಿತ್ತು.

ಕಳೆದ 5 ವರ್ಷಗಳ ಹಿಂದೆ ವೇದಿಕೆಯೊಂದರಲ್ಲಿ ಅಮಿತ್ ಶಾ ಅವರೊಂದಿಗೆ ಕಾಣಿಸಿಕೊಂಡಿದ್ದರು. 5 ವರ್ಷಗಳ ಹಳೇ ಫೋಟೋವನ್ನು ದಾಸ್ ಹಂಚಿಕೊಂಡಿದ್ದಾರೆ. ಬಂಧನಕ್ಕೆ ಒಳಗಾಗಿರುವ ಅಧಿಕಾರಿಯ ಜೊತೆ ಇರುವ ಫೋಟೊ ಈಗ ಹಂಚಿಕೊಂಡು ಜನತೆಯ ದಾರಿ ತಪ್ಪಿಸಿದ್ದಾರೆ ಎಂದು ವ್ಯಾಸ್ ತಿಳಿಸಿದ್ದಾರೆ.

ಇದನ್ನು ಓದಿ :ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಮನೆ ಸೇರಿ 7 ಕಡೆ CBI ದಾಳಿ

ಮೇ 8ರ ಟ್ವಿಟ್ಟರ್ ಪೋಸ್ಟ್ಗಾಗಿ ದಾಸ್ ವಿರುದ್ಧ ಐಪಿಸಿ 469 (ನಕಲಿ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಿರ್ದೇಶಕ ದಾಸ್ ಕಳೆದ ಮಾರ್ಚ್ 17 ರಂದು ತಮ್ಮ ಫೇಸ್‌ಬುಕ್‌ನಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡುವ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದರು . ಈ ಪ್ರಕರಣ ಸಹ ದಾಖಲಿಸಲಾಗಿದೆ
ಬಾಲಿವುಡ್‌ನಲ್ಲಿ ಅವಿನಾಶ್ ದಾಸ್ ಸ್ವರಾ ಭಾಸ್ಕರ್ ಅವರ `ಅನಾರ್ಕಲಿ ಆಫ್ ಆರಹ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!