ಎಲ್‌ಪಿಜಿ ಸಿಲಿಂಡರ್ ವಿತರಣೆಗೆ ನ.1ರಿಂದ ಹೊಸ ನಿಯಮ ಜಾರಿ

Team Newsnap
1 Min Read
image source : google

ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆಗೆ ಕೇಂದ್ರ ಸರ್ಕಾರವು ನ. 1 ರಿಂದ ಹೊಸ ನಿಯಮವನ್ನು ಜಾರಿಗೆ ತರಲಿದೆ. ಇದರಿಂದ ಈ ಮುಂಚೆ ಸಿಲಿಂಡರ್ ವಿತರಣೆ ಸರಳವಾಗಿದ್ದಷ್ಟು ನ.1 ರಿಂದ ಇರುವುದಿಲ್ಲ.

ನವೆಂಬರ್ ತಿಂಗಳಿನಿಂದ ಎಲ್‌ಪಿಜಿ ಹೋಮ್‌ ಡೆಲಿವರಿಯಲ್ಲಿನ‌ ನಿಯಮಗಳ ಬದಲಾವಣೆಯ ಕುರಿತು ಮಾಹಿತಿ ನೀಡಿರುವ ತೈಲ‌ ಕಂಪನಿಗಳು ‘ಸಿಲಿಂಡರ್‌ನಿಂದ ಅನಿಲ ಕದಿಯುದಕ್ಕೆ ಕಡಿವಾಣ ಹಾಕಲು ಹಾಗೂ ಸರಿಯಾದ ಗ್ರಾಹಕರನ್ನು ಗುರುತಿಸಲು ಎಲ್‌ಪಿಜಿ ಸಿಲಿಂಡರ್‌ಗಳ ಡೆಲಿವರಿಯಲ್ಲಿ ಕೆಲವು ನಿಯಮಗಳನ್ನು ಅಳವಡಿಸಲಾಗಿದೆ.

ಇನ್ನು ಮುಂದೆ ಹೊಸ ಸಿಲಿಂಡರ್‌ನ್ನು ಬುಕ್ ಮಾಡಿದಾಗ ಗ್ರಾಹಕರ ನೊಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ‘ವಿತರಣಾ ಧೃಢೀಕರಣ ಕೋಡ್’ ಬರಲಿದೆ. ಗ್ರಾಹಕರು ಸಿಲಿಂಡರ್‌ನ್ನು ಹೋಮ್ ಡೆಲಿವರಿ ಪಡೆದುಕೊಳ್ಳುವಾಗ ಡೆಲಿವರಿ ಹುಡುಗನಿಗೆ ಆ ಕೋಡ್ ನೀಡಬೇಕಾಗುತ್ತದೆ. ಆಗ ಮಾತ್ರ ಗ್ರಾಹಕರು ಸಿಲಿಂಡರ್‌ ಡೆಲಿವರಿ ಪಡೆದುಕೊಳ್ಳಬಹುದು’ ಎಂದು ಹೇಳಿದೆ.

ಒಂದು ವೇಳೆ ಗ್ರಾಹಕರ‌ ನೊಂದಾಯಿತ ಮೊಬೈಲ್ ಸಂಖ್ಯೆಯನ್ನು ಬದಲಿಸಲು ಬಯಸಿದಲ್ಲಿ ಡೆಲಿವರಿ‌ ಹುಡುಗನ ಹತ್ತಿರ ಬದಲಿಸಿಕೊಳ್ಳಬಹುದು. ನೊಂದಾಯಿತ ಸಂಖ್ಯೆಯನ್ನು ಬದಲಿಸಲು ಡೆಲಿವರಿ ಹುಡುಗನಿಗೆ ಆ್ಯಪ್ ಒಂದನ್ನು ನೀಡಲಾಗುತ್ತದೆ.

ಮನೆ ಬಳಕೆಯ ಸಿಲಿಂಡರ್‌ಗಳಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ವಾಣಿಜ್ಯ ಸಿಲೆಂಡರ್‌ಗಳಿಗಲ್ಲ. ಪ್ರಸ್ತುತ ದೇಶದ 100 ನಗರಗಳಲ್ಲಿ ಪ್ರಾಯೋಗಿಕವಾಗಿ ಈ ನಿಯಮವನ್ನು ಸರ್ಕಾರ ಜಾರಿ ಮಾಡಲಿದೆ. ನಂತರ ದೇಶದ ಪ್ರತಿಯೊಂದು ಊರುಗಳಲ್ಲೂ ಹೊಸ ನಿಯಮ ಜಾರಿಗೆ ಬರಲಿದೆ.

Share This Article
Leave a comment