January 29, 2026

Newsnap Kannada

The World at your finger tips!

dc sharath

ಖಿನ್ನತೆಗೆ ಒಳಗಾಗಿರುವ ಶರತ್ ಆಸ್ಪತ್ರೆಗೆ ದಾಖಲು

Spread the love

ಮೈಸೂರಿನಿಂದ ನಿಯಮ ಬಾಹಿರವಾಗಿ ವರ್ಗವಾಗಿದ್ದ ಜಿಲ್ಲಾಧಿಕಾರಿ‌ ಬಿ. ಶರತ್ ಖಿನ್ನತೆಗೆ ಒಳಗಾಗಿ ಆಸ್ಪತ್ರೆಗೆ‌ ದಾಖಲಾಗಿದ್ದಾರೆ.

ತಮ್ಮ ನಿವಾಸದಲ್ಲಿ ಮಾನಸಿಕ ಅಸ್ವಸ್ಥಗೊಂಡ ಅವರನ್ನು ಮೈಸೂರಿನ ಕುವೆಂಪು ನಗರದ ಖಾಸಗೀ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸರ್ಕಾರವು ಶರತ್ ಅವರನ್ನು ಮೈಸೂರಿನ‌ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಒಂದು ತಿಂಗಳು ಕಳೆಯುವ ಮುನ್ನವೇ ವರ್ಗ ಮಾಡಿ ಆದೇಶ ನೀಡಿತ್ತು.

ಶರತ್ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನು ತಂದು ಕೂರಿಸಿತ್ತು. ಸರ್ಕಾರದ ಈ ನಿಯಮ ಬಾಹಿರ ನಡೆಯನ್ನು ಪ್ರಶ್ನೆ‌ ಮಾಡಿ‌ ಶರತ್ ಸಿಎಟಿ‌ ಕೋರ್ಟ್ ಮೆಟ್ಟಿಲೇರಿದ್ದರು.

ಆದರೆ ಸಿಎಟಿ‌ ಕೋರ್ಟ್ ಶರತ್ ಅರ್ಜಿ‌ವಿಚಾರಣೆಯನ್ನು ಎರಡು ಬಾರಿ‌ ಮುಂದೂಡಿತ್ತು. ಅಕ್ಟೋಬರ್ 16 ರಂದು ಎರಡನೇ ಬಾರಿ ವಿಚಾರಣೆಯನ್ನು ಮುಂದೂಡಿದ್ದ ಕೋರ್ಟ್ ಅಕ್ಟೋಬರ್ 23 ಕ್ಕೆ ವಿಚಾರಣೆಯ ದಿನಾಂಕವನ್ನು ನಿಗದಿ ಮಾಡಿತ್ತು.

ಇದೇ ಕಾರಣಕ್ಕೆ ಮಾನಸಿಕ ಸಮತೋಲನ‌ ಕಳೆದುಕೊಂಡಿದ್ದರು ಎನ್ನಲಾಗಿದೆ.

error: Content is protected !!