ಅಕ್ಕನಿಗೆ ನಿಶ್ಚಯವಾಗಿದ್ದ ವರನೊಂದಿಗೆ ತಂಗಿ ಮದುವೆಯಾದ, ತಂಗಿಗೆ ನಿಶ್ಚಯವಾದ ವರನೊಂದಿಗೆ ಅಕ್ಕನನ್ನು ಒಂದೇ ಮಂಟಪದಲ್ಲಿ ಮದುವೆಯಾಗಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ಮದುವೆ ವೇಳೆ ವಿದ್ಯುತ್ ವ್ಯತ್ಯಯದಿಂದಾಗಿ. ಅಚಾತುರ್ಯ ನಡೆದಿದೆ.
ರಮೇಶ್‍ಲಾಲ್ ಅರವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾಗೆ ಬೇರೆ, ಬೇರೆ ಊರಿನ ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರೊಂದಿಗೆ ಮದುವೆ ನಿಶ್ಚಯವಾಗಿತ್ತು.
ಭಾನುವಾರ ಮುಹೂರ್ತದ ವೇಳೆ ಕರೆಂಟ್ ಹೋಗಿದ್ದರಿಂದ, ಅಕ್ಕ, ತಂಗಿ ಇಬ್ಬರು ಒಂದೇ ಬಣ್ಣದ ಉಡುಗೆ ಮತ್ತು ಹೂ ಮುಡಿದುಕೊಂಡಿದ್ದರಿಂದ ಅದಲು, ಬದಲು ಆಗಿ ವರರ ಜೊತೆಗೆ ಮದುವೆಯಾಗಿದೆ.
ಮದುವೆ ವೇಳೆ ಪುರೋಹಿತರು ಕೂಡ ಬದಲಾಗಿದ್ದ ವಧುಗಳ ಕೈ ಹಿಡಿದು ವರರಿಗೆ ಅಗ್ನಿ ಕುಂಡಲವನ್ನು ಸುತ್ತಿಸಿದ್ದಾರೆ. ಆದರೆ ಈ ವೇಳೆ ಸಹ ವಧು ಬದಲಾಗಿರುವ ವಿಚಾರ ತಿಳಿದಿಲ್ಲ. ಆದರೆ ವಿವಾಹ ನಂತರ ವರರಿಬ್ಬರು ತಮ್ಮ ಪತ್ನಿಯನ್ನು ಮನೆಗೆ ಕರೆದೊಯ್ದಾಗ ಅದಲು, ಬದಲು ಆಗಿರುವ ವಿಚಾರ ತಿಳಿದುಬಂದಿದೆ.
ಇದೀಗ ವಧು-ವರರು ಮರುದಿನ ಮತ್ತೊಮ್ಮೆ ವಿವಾಹ ಮಾಡುವಂತೆ ಕೇಳಿಕೊಂಡಿದ್ದಾರೆ!
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು