December 25, 2024

Newsnap Kannada

The World at your finger tips!

rohit joshi

ಮದ್ಯ ಕುಡಿಸಿ ಯುವತಿ ಮೇಲೆ ರೇಪ್ – ರಾಜಸ್ಥಾನ ಸಚಿವರ ಪುತ್ರನ ವಿರುದ್ಧ FIR

Spread the love

ರಾಜಸ್ಥಾನ ಸಚಿವ ಮಹೇಶ್ ಜೋಶಿ ಪುತ್ರ ರೋಹಿತ್ ಜೋಶಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಕಾರಣಕ್ಕಾಗಿ ಆತನ ವಿರುದ್ಧ FIR ದಾಖಲಾಗಿದೆ.

ಕಳೆದ ವರ್ಷ ಜೈಪುರ ಮತ್ತು ದೆಹಲಿಯಲ್ಲಿ 23 ವರ್ಷದ ಯುವತಿಯ ಮೇಲೆ ರೋಹಿತ್ ಜೋಶಿ ಅತ್ಯಾಚಾರವೆಸಗಿದ್ದಾರೆ ಎಂದು ದೂರಲಾಗಿದೆ

ಜೈಪುರ ಮೂಲದ ಯುವತಿಯ ಮೇಲೆ 2021ರ ಜನವರಿ 8 ರಿಂದ ಏಪ್ರಿಲ್ 17ರ ನಡುವೆ ಈ ವರ್ಷದಲ್ಲಿ ಅನೇಕ ಬಾರಿ ರೋಹಿತ್ ಜೋಶಿ ಅತ್ಯಾಚಾರವೆಸಗಿದ್ದಾರೆ ಈ ಕುರಿತಂತೆ ದೆಹಲಿ ಪೊಲೀಸರು ರೋಹಿತ್ ಜೋಶಿ ವಿರುದ್ಧ ಜೀರೋ ಎಫ್‍ಐಆರ್ ದಾಖಲಿಸಿದ್ದಾರೆ.

ಇದನ್ನು ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜೊತೆಯಲ್ಲಿರುವ ಈ ಹುಡುಗ ಯಾರು?

ಈ ಸಂಬಂಧ ಮೇ 8ರಂದು ಉತ್ತರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 376(ಅತ್ಯಾಚಾರ), 328(ಅಪರಾಧ ಮಾಡುವ ಉದ್ದೇಶದಿಂದ ನೋವುಂಟು ಮಾಡುವುದು, ಇತ್ಯಾದಿ), 312(ಗರ್ಭಪಾತಕ್ಕೆ ಕಾರಣ), 366(ಅಪಹರಣ, ಮಹಿಳೆಯನ್ನು ಅಪಹರಣ ಮಾಡುವುದು ಅಥವಾ ಮದುವೆಗೆ ಒತ್ತಾಯಿಸುವುದು ಇತ್ಯಾದಿ), 377(ಅಸ್ವಾಭಾವಿಕ ಅಪರಾಧಗಳು) ಮತ್ತು 506(ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!