ಕರ್ನಾಟಕದಿಂದ ವಾರಾಣಸಿಗೆ ವಿಶೇಷ ರೈಲು : ಸಚಿವೆ ಶಶಿಕಲಾ ಜೊಲ್ಲೆ

Team Newsnap
1 Min Read

ಕರ್ನಾಟಕದಿಂದ ಕಾಶಿಗೆ ಹೋಗುವ ಯಾತಾರ್ಥಿಗಳಿಗೆ ಶೀಘ್ರವೇ ವಾರಣಾಸಿಗೆ ವಿಶೇಷ ರೈಲು ಸಂಚಾರಕ್ಕೆ ಯೋಜನೆ ರೂಪಿಸಲಾಗಿದೆ.

ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಈ ಕುರಿತು ಮಾಹಿತಿ ನೀಡಿ, ವಾರಣಾಸಿಗೆ ವಿಶೇಷ ರೈಲು ಸಂಚಾರಕ್ಕೆ ಯೋಜನೆ ರೂಪಿಸಲಾಗಿದೆ.

ಪ್ರತಿ ವರ್ಷ 30,000 ಕಾಶಿ ಯಾತ್ರಾರ್ಥಿಗಳಿಗೆ ತಲಾ 5,000 ರೂ.ಗಳನ್ನು ನೀಡಲು ರಾಜ್ಯ ಸರ್ಕಾರ ಈಗಾಗಲೇ ನಿರ್ಧರಿಸಿದೆ ಎಂದರು.

15 ವರ್ಷಗಳಿಂದ ಸೇವೆ ಸಲ್ಲಿಸಿದ ಹಳೆಯ ರೈಲುಗಳನ್ನು ಪ್ರವಾಸೋದ್ಯಮಕ್ಕಾಗಿ ಗುತ್ತಿಗೆಗೆ ನೀಡಲಾಗುವುದು. ರೈಲ್ವೆಯಲ್ಲಿ ನೋಂದಣಿಗಾಗಿ ನಾವು 1 ಲಕ್ಷ ರು ಗಳನ್ನು ಪಾವತಿಸಿದ್ದೇವೆ. ಈ ರೈಲಿನಲ್ಲಿ 12 ಎಸಿ ಮತ್ತು ಎರಡು ನಾನ್-ಎಸಿ ಬೋಗಿಗಳು ಇರಲಿವೆ. ಕಾಶಿ, ಶ್ರೀಶೈಲ ಮತ್ತು ಅಂಜನಾದ್ರಿ ಸೇರಿದಂತೆ 7 ದಿನಗಳ ಪ್ರವಾಸವನ್ನು ನಾವು ಯೋಜಿಸಿದ್ದೇವೆ. ಈ ರೈಲು ಶೀಘ್ರದಲ್ಲೇ ಸಂಚರಿಸಲಿವೆ ಎಂದು ಹೇಳಿದ್ದಾರೆ.

Share This Article
Leave a comment