December 25, 2024

Newsnap Kannada

The World at your finger tips!

abisheka 1

ಅಭಿಷೇಕ್ ಅಂಬರೀಷ್ ನನ್ನು ಬಿಜೆಪಿಗೆ ಸೆಳೆಯಲು ಮೆಗಾ ಪ್ಲಾನ್ !

Spread the love

ಮಂಡ್ಯದಲ್ಲಿ ಬಿಜೆಪಿ ಸಂಘಟನೆಗೆ ಯುವ ನಾಯಕತ್ವ ಬರುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿಕೆ ಬೆನ್ನಲ್ಲೇ ಆ ಯುವ ನಾಯಕ ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅಭಿಷೇಕ್ ಅಂಬರೀಷ್ ರನ್ನು ಸೆಳೆಯಲು ಬಿಜೆಪಿ ಪ್ಲಾನ್ ಮಾಡುತ್ತಿದೆ.

ಮಂಡ್ಯದಲ್ಲಿ ಬಿಜೆಪಿಗೆ ಶಕ್ತಿ ಇಲ್ಲ. ಕಳೆದ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್‌ ಜಯಭೇರಿ ಭಾರಿಸಿತ್ತು.

ಜೆಡಿಎಸ್‌, ಕಾಂಗ್ರೆಸ್‌ನ ಭದ್ರಕೋಟೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕಮಲ ಅರಳುವುದು ಕಷ್ಟ. ಆದರೆ ಈ ಬಾರಿ ಹೇಗಾದರೂ ಮಾಡಿ ಕಮಲ ಅರಳಿಸಲೇಬೇಕೆಂದು ಬಿಜೆಪಿ ಹೈಕಮಾಂಡ್‌ ಪಣ ತೊಟ್ಟಿದೆ.

ಈ ಕಾರಣಕ್ಕೆ ಯುವ ನಾಯಕನ್ನು ಕರೆ ತರಲು ಬಿಜೆಪಿ ಮುಂದಾಗಿದೆ. ಯುವ ನಾಯಕ ಮಾತುಗಾರನಾಗಿರಬೇಕು ಮತ್ತು ರಾಜಕೀಯ ಗೊತ್ತಿರಬೇಕು. ಈ ಅರ್ಹತೆ ಇರುವ ವ್ಯಕ್ತಿಯನ್ನು ಹುಡುಕುತ್ತಿರುವ ಬಿಜೆಪಿ ನಾಯಕರ ಕಣ್ಣಿಗೆ ಅಭಿಷೇಕ್‌ ಅಂಬರೀಶ್‌ ಕಾಣಿಸಿದ್ದಾರೆ. 

ಮಂಡ್ಯದಲ್ಲಿ ಬಿಜೆಪಿ ಸಂಘಟನೆಗೆ ಯುವ ನಾಯಕತ್ವ ಬರುತ್ತದೆ ಎಂದು ಸಿಎಂ ಹೇಳಿದ್ದರು. ಈ ಯುವ ನಾಯಕ ಯಾರು ಎಂದು ಹೇಳಿರಲಿಲ್ಲ. ಈಗ ಬಂದಿರುವ ಮಾಹಿತಿ ಪ್ರಕಾರ ಅಭಿಷೇಕ್‌ ಅವರನ್ನು ಬಿಜೆಪಿಗೆ ಸೆಳೆಯಲು ಮಾತುಕತೆ ನಡೆಯುತ್ತಿವೆ.

ಅಭಿಷೇಕ್‍ಗೂ ಮೊದಲು ಸುಮಲತಾ ಆಪ್ತ ಸಚ್ಚಿದಾನಂದ ಬಿಜೆಪಿ ಸೇರ್ಪಡೆಗೆ ಪ್ಲಾನ್ ಮಾಡಲಾಗಿದೆ. ಸಚ್ಚಿದಾನಂದ ಬಳಿಕ ಸುಮಲತಾ ಅವರನ್ನು ಪಕ್ಷಕ್ಕೆ ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ಮದುವೆ ಕಾರ್ಯಕ್ರಮದಲ್ಲಿ ಸಿಎಂ ಜೊತೆ ಸುಮಲತಾ, ಅಭಿಷೇಕ್ ಮಾತನಾಡುತ್ತಿರುವ ಫೋಟೋ ವೈರಲ್‌ ಆಗಿತ್ತು.
ಬಿಜೆಪಿಗೆ ಬರುವ ಬಗ್ಗೆ ಸುಮಲತಾ ಅಂಬರೀಶ್‌ ಮತ್ತು ಅಭಿಷೇಕ್‌ ಇಲ್ಲಿಯವರೆಗೂ ಎಲ್ಲೂ ಅಧಿಕೃತವಾಗಿ ತಿಳಿಸಿಲ್ಲ.  ಸುಮಲತಾ ಜನರ ಜೊತೆ ಚರ್ಚೆ ಮಾಡಿ ನಿರ್ಧಾರ ತಿಳಿಸುತ್ತೇನೆ ಎಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!