15 ಸಾವಿರ ರು ಲಂಚ ಸ್ವಿಕಾರ : ACB ಯಿಂದ ಮಂಡ್ಯ ಜಿಲ್ಲಾ ಪರಿಸರ ಅಧಿಕಾರಿ ಹೇಮಲತಾ ಬಂಧನ

Team Newsnap
1 Min Read

ಲಂಚ ಸ್ವೀಕಾರದ ವೇಳೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಡ್ಯ ಜಿಲ್ಲಾ ಪರಿಸರ ಅಧಿಕಾರಿ ಹೇಮಲತಾ ಮೇಲೆ ACB ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಹಲಗೂರಿನಲ್ಲಿ ಪೆಟ್ರೋಲ್‌ ಬಂಕ್‌ಗೆ ನಿರಾಪೇಕ್ಷಣಾ ಪತ್ರ (ಎನ್‌ಒಸಿ) ನೀಡಲು ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರದ ದಳ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಬಂಧಿಸಿದ್ದಾರೆ.

ಮಳವಳ್ಳಿ ತಾಲೂಕು ಹಲಗೂರು ಪಟ್ಟಣದ ಶಶಿಕಾಂತ್‌ ಪೆಟ್ರೋಲ್‌ ಬಂಕ್‌ ಸ್ಥಾಪನೆಗೆ ಎನ್‌ಒಸಿ ಕೋರಿದ್ದರು.

ಪರಿಸರ ಅಧಿಕಾರಿ ಹೇಮಲತಾ 30 ಸಾವಿರ ರು ಬೇಡಿಕೆ ಇಟ್ಟಿದ್ದರು, ಮುಂಗಡವಾಗಿ 15 ಸಾವಿರ ರು ಕೊಡುವಂತೆ ಸೂಚಿಸಿದ್ದರು. ಈ ಅಧಿಕಾರಿ ಬಗ್ಗೆ ಶಶಿಕಾಂತ್‌ ಎಸಿಬಿಗೆ ದೂರು ನೀಡಿದ್ದರು.

ಶುಕ್ರವಾರ ನಗರದ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ 15 ಸಾವಿರ ರು ಲಂಚ ಪಡೆಯುವ ವೇಳೆ ಎಸಿಬಿ ಮೈಸೂರು ವಿಭಾಗದ ಎಸ್ಪಿ ವಿ ಜೆ ಸಜಿತ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಧರ್ಮೇಂದ್ರ ನೇತೃತ್ವದ ತಂಡ ದಾಳಿ ನಡೆಸಿತು.

ಇದನ್ನು ಓದಿ : 20 ಸಾವಿರ ರು ಲಂಚ ಸ್ವೀಕಾರ:ಬೋಗಾದಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ACB ಬಲೆಗೆ

ಹೇಮಲತಾ ಅವರನ್ನು ಬಂಧಿಸಿದ ಅಧಿಕಾರಿಗಳು ನಗದು ಹಾಗೂ ಇತರ ದಾಖಲಾತಿಗಳನ್ನು ವಶಕ್ಕೆ ಪಡೆದರು.

ದಾಳಿಯಲ್ಲಿ ಎಸಿಬಿ ಇನ್‌ಸ್ಪೆಕ್ಟರ್‌ಗಳಾದ ಪುರುಷೋತ್ತಮ್‌, ವಿನೋದ್‌ರಾಜ್‌ ಹಾಗೂ ಸಿಬ್ಬಂದಿ ವೆಂಕಟೇಶ್‌, ಮಹದೇವು, ಕುಮಾರ್‌, ಪಾಪಣ್ಣ, ಮಹೇಶ್‌ ಭಾಗಿಯಾಗಿದ್ದರು.

Share This Article
Leave a comment