ಜಾಗತಿಕ ಹಸಿವು ಸೂಚ್ಯಾಂಕ 2020- ಭಾರತಕ್ಕೆ 94 ನೇ ಸ್ಥಾನ

Team Newsnap
1 Min Read

ಜಾಗತಿಕ ಹಸಿವಿನ ಸೂಚ್ಯಾಂಕದಲ್ಲಿ ಭಾರತವು 94ನೇ ಸ್ಥಾನದಲ್ಲಿದೆ. ಕಳೆದ ವರ್ಷ ನಡೆದ ಅಧ್ಯಯನದಲ್ಲಿ ಭಾರತವು 102ನೇ ಸ್ಥಾನದಲ್ಲಿತ್ತು. ಆಧರೆ, ಈ ಬಾರಿ ಭಾರತದಲ್ಲಿ ಹಸಿವಿನಿಂದ ಹಾಗೂ ಅಪೌಷ್ಟಿಕತೆಯಿಂದ ನರಳುತ್ತಿರುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ.

ಸುಮಾರು 107 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 94ನೇ ಸ್ಥಾನ ಲಭಿಸಿದೆ. ಭಾರತದಲ್ಲಿ ಸುಮಾರು 14% ಜನರು ಹಸಿವಿನಿಂದ ಹಾಗೂ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಅಧ್ಯಯನದ ಪ್ರಕಾರ, ದಕ್ಷಿಣ ಏಷ್ಯಾ ಹಾಗೂ ಆಫ್ರಿಕಾದ ದಕ್ಷಿಣ ಸಹಾರಾದಲ್ಲಿ ಅತೀ ಹೆಚ್ಚು ಹಸಿವು ಮತ್ತು ಅಪೌಷ್ಟಿಕತೆ ಕಂಡುಬಂದಿದೆ.

UN ಮತ್ತು ಇತರ ಸಂಸ್ಥೆಗಳು ಕಲೆಹಾಕಿದ ದತ್ತಾಂಶಗಳನ್ನು ಬಳಸಿಕೊಂಡು ಈ ಅಧ್ಯಯನವನ್ನು ಮಾಡಲಾಗಿದೆ. ʼGlobal Hunger Index’ ಪಟ್ಟಿಯಲ್ಲಿ, ದಕ್ಷಿಣ ಏಷ್ಯಾದ ಇತರ ರಾಷ್ಟ್ರಗಳಾದ ಪಾಕಿಸ್ತಾನ್‌ (88), ನೇಪಾಳ (73), ಬಾಂಗ್ಲಾದೇಶ (75). ಶ್ರೀಲಂಕಾ (64) ಮತ್ತು ಮಯನ್ಮಾರ್‌ (78) ಗಳಲ್ಲಿಯೂ ಹಸಿವು ಅತೀರೇಕಕ್ಕೆ ಏರಿರುವುದು ಕಂಡು ಬಂದಿದೆ.

ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ಬೆಳವಣಿಗೆಯಲ್ಲಿನ ಅಸಮತೋಲನದ ವಿಚಾರದಲ್ಲಿಯೂ ದಕ್ಷಿಣ ಏಷ್ಯಾದ ರಾಷ್ಟ್ರಗಳು ಬೇರೆ ಎಲ್ಲಾ ರಾಷ್ಟ್ರಗಳಿಗಿಂತ ಕಡಿಮೆ ಅಭಿವೃದ್ದಿ ಸಾಧಿಸಿವೆ. ಅದರಲ್ಲೂ ಭಾರತದಲ್ಲಿ ಅತೀ ಹೆಚ್ಚು ಅಂದರೆ 17.3% ಮಕ್ಕಳು ಬೆಳವಣಿಗೆಯಲ್ಲಿ ಅಸಮತೋಲನವನ್ನು ಕಾಣುತ್ತಿವೆ.

ಭಾರತದ ಮಟ್ಟಿಗೆ ಧನಾತ್ಮಕ ವಿಚಾರ ಏನೆಂದರೆ, ಐದು ವರ್ಷದ ಕೆಳಗಿನ ಮಕ್ಕಳ ಸಾವಿನಲ್ಲಿ ಇಳಿಕೆಯಾಗಿದೆ. ಪ್ರಪಂಚದಲ್ಲಿ ಛಾಡ್‌, ಟೈಮರ್‌-ಲೆಸ್ಟೆ ಮತ್ತು ಮಡಗಾಸ್ಕರ್‌ ಹೊರತುಪಡಿಸಿ ಬೇರೆ ಯಾವ ರಾಷ್ಟ್ರಗಳು ಕೂಡಾ ಹಸಿವಿನ ಸೂಚ್ಯಂಕದಲ್ಲಿ ಅತೀ ಅಪಾಯದ ಮಟ್ಟದಲ್ಲಿ ಇಲ್ಲ, ಎಂದು ವರದಿ ಹೇಳಿದೆ.

Share This Article
Leave a comment