December 23, 2024

Newsnap Kannada

The World at your finger tips!

jcb

ಕೆ.ಆರ್.ಪೇಟೆಯ ಅಕ್ರಮ ಕಟ್ಟಡಗಳ ತೆರವು: ಮಾಜಿ ಶಾಸಕನಿಗೆ ಬಿಗ್ ಶಾಕ್

Spread the love

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಶನಿವಾರ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ತಾಲೂಕು ಆಡಳಿತ ಹಾಗೂ ಪುರಸಭೆಗಳು ಜಂಟಿಯಾಗಿ ನಿರ್ವಹಿಸಿದವು.

ಈ ಅಕ್ರಮ ಕಟ್ಟಡಗಳು ಕಾಂಗ್ರೆಸ್‌ನ ಮಾಜಿ ಶಾಸಕ ಸಹೋದರನಿಗೆ ಸೇರಿದ ಕಟ್ಟಡಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವು ಮಾಡಲಾಗಿದೆ. ಸ್ಥಳೀಯ ಆಡಳಿತದ ಈ ಕ್ರಮ ಮಾಜಿ ಶಾಸಕರಿಗೆ ದೊಡ್ಡ ಶಾಕ್ ನೀಡಿದೆ.

ಕೆ.ಆರ್. ಪೇಟೆಯ ಹೃದಯ ಭಾಗದಲ್ಲಿರುವ, ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್ ಅವರ ಸಹೋದರನಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ಸ್ಥಳೀಯ ಆಡಳಿತಗಳು ಇಂದು ಜೆಸಿಬಿ ಯಂತ್ರಗಳ ಮೂಲಕ ನೆಲಸಮಗೊಳಿಸಿವೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡುವ ದೃಷ್ಠಿಯಿಂದ ಕೆ.ಆರ್. ಪೇಟೆಯಲ್ಲಿ ಇಂದು ನಿಷೇಧಾಜ್ಞೆ ಹೇರಲಾಗಿತ್ತು.

ತಾಲೂಜಿನ ತಹಶೀಲ್ದಾರ್ ಶಿವಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಸತೀಶ್ ಅವರ ನೇತೃತ್ವದಲ್ಲಿ ಚಂದ್ರಶೇಖರ್ ಅವರ ಸಹೋದರನಿಗೆ ಸೇರಿದ್ದ, ಅಕ್ರಮವಾಗಿ ನಿರ್ಮಿಸಲ್ಪಟ್ಟಿದ್ದ ಎರಡು-ಮೂರು ಅಂತಸ್ತಿನ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯಿತು. ಇದಕ್ಕಾಗಿ ಬಿಗಿಯಾದ ಪೋಲೀಸ್ ರಕ್ಷಣೆಯನ್ನೂ ಸ್ಥಳೀಯ ಆಡಳಿತಗಳು ಪಡೆದುಕೊಂಡಿದ್ದವು.

Copyright © All rights reserved Newsnap | Newsever by AF themes.
error: Content is protected !!