December 24, 2024

Newsnap Kannada

The World at your finger tips!

manjunath

ಕೊರೋನಾ ವಿರುದ್ದ ಹೋರಾಡಿ ಮಡಿವ ವಾರಿಯರ್ಸ್‌ ಹುತಾತ್ಮರು ಡಾ. ಮಂಜುನಾಥ್

Spread the love

ಮಹಾಮಾರಿ‌ ಕೊರೋನಾ ವಿರುದ್ಧ ಹೋರಾಡಿದವರ ಜೀವನವನ್ನು ಬಲಿ‌ ಪಡೆದಿದೆ. ‘ಕೋರೋನಾ ವಾರಿಯರ್ಸ್ ಮೃತರಾದರೆ ಅವರನ್ನು ಹುತಾತ್ಮರೆಂದು ಕರೆಯಿರಿ’ ಎಂದು ಸೂಚನೆ ನೀಡಿದರು.

ಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ, ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು‌ ‘ಹೇಗೆ ಮೃತರಾದ ಯೋಧರಿಗೆ ಗೌರವ ಸಿಗುತ್ತದೆಯೋ‌ ಹಾಗೆಯೇ ಕೊರೋನಾ ವಾರಿಯರ್ಸ್‌‌ಗಳಿಗೂ ಸಹ ಅದೇ ರೀತಿಯ ಗೌರವ ಸಿಗಬೇಕು’ ಎಂದು ಹೇಳಿದರು.

‘ದಸರಾ ಉದ್ಘಾಟನೆ ಹಾಗೂ ಕೊರೋನಾ ವಾರಿಯರ್ಸ್‌ಗಳಿಗೆ ಅಭಿನಂದನೆ ಸಲ್ಲಿಸಿದ್ದು ನನ್ನ ಜೀವಿತಾವಧಿಯ, ವೈದ್ಯ ಸಮುದಾಯಕ್ಕೆ ಕೊಟ್ಟ ದೊಡ್ಡ ಗೌರವ’ ಎಂದರು.

ದೇವಿಯ ಮುಂದೆ 3 ಬೇಡಿಕೆ

ಇಂದು ನಾನು ಚಾಮುಂಡೇಶ್ವರಿ ತಾಯಿಯಲ್ಲಿ ಬೇರೆ ಏನೂ ಬೇಡಿಕೊಂಡಿಲ್ಲ. ಕೊರೋನಾ ಸಂಪೂರ್ಣ ಗುಣವಾಗಲಿ, ಕೊರೋನಾ ಲಸಿಕೆ ಬರಲಿ‌, ರಾಜ್ಯದಲ್ಲಿ ವರುಣ ಆರ್ಭಟವೂ ನಿಲ್ಲಲಿ ಎಂದು ಬೇಡಿಕೊಂಡಿದ್ದೇನೆ’ ಎಂದು ತಿಳಿಸಿದರು.

‘ಈ ವರ್ಷ ಕೊರೋನಾ ಲಸಿಕೆ ಸಿಗುವ ಸಂಭವ ಕಡಿಮೆ‌ ಇದೆ. 2021ರ ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಲಸಿಕೆ ಸಿಗಬಹುದು. ಯಾರಾದರೂ ಕೊರೋನಾ ಸೋಂಕು ಪೀಡಿತರಾದರೆ ಅವರನ್ನು ಅಸ್ಪೃಶ್ಯರಂತೆ ಕಾಣಬೇಡಿ. ವೈದ್ಯರ ಮೇಲೆ ಒತ್ತಡ ಹೆಚ್ಚಾಗುತ್ತಿರುವದಲ್ಲದೇ‌ ಅವರೂ ಸಹ ಕೊರೋನಾ ಪೀಡಿತರಾಗುತ್ತಿದ್ದಾರೆ. ಹಾಗಾಗಿ ವೈದ್ಯರ ಮೇಲೆಯಾಗಲೀ, ಆಸ್ಪತ್ರೆಯ ಮೇಲಾಗಲೀ ಹಲ್ಲೆ ಮಾಡಬೇಡಿ. ಗ್ರಾಮೀಣ ಭಾಗದ ವೈದ್ಯರಿಗೆ ರಕ್ಷಣೆ ಇಲ್ಲದಿರುವದರಿಂದ ಗ್ರಾಮೀಣ ಪ್ರದೇಶಗಲಳಿಗೆ ವೈದ್ಯರು ತೆರಳಲು ಹಿಂದೆ ಮುಂದೆ ನೋಡುತ್ತಿದ್ದಾರೆ‌. ಹಾಗಾಗಿ ಗ್ರಾಮೀಣ ಭಾಗದ ಆಸ್ಪತ್ರೆಗಳನ್ನು ಜಿಲ್ಲಾ ಪಂಚಾಯತ್‌ನಿಂದ ಜಿಲ್ಲಾ ಕೇಂದ್ರದ ನಿಯಂತ್ರಣಕ್ಕೊಳಪಡಿಸಬೇಕು’ ಎಂದು ಸಲಹೆ ನೀಡಿದರು.

ಸಾಮಾಜಿಕ ಜಾಲತಾಣಗಳು ಸಮಾಜ ಒಡೆಯುತ್ತಿರುವ ಬಗೆಗೆ ವಿಷಾದ ವ್ಯಕ್ತಪಡಿಸಿದ ಅವರು‌ ‘ಜಗತ್ತಿನಲ್ಲಿ ಬದುಕುವ ಭಾಷೆ ಇಂಗ್ಲಿಷ್. ಆದರೆ ನಮಗೆ ನಮಗೆ ಕನ್ನಡವೇ ಕಣ್ಣಾಗಬೇಕು.‌ಕನ್ನಡಕವಲ್ಲ’ ಎಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!