ಟಿಬೇಟ್‌ನ ‘ದೇಶ ಭ್ರಷ್ಟಸರ್ಕಾರ’ಕ್ಕೆ ಅಮೇರಿಕಾ ಮಾನ್ಯತೆ: ಚೀನಾಗೆ ಸಂಕಷ್ಟ

Team Newsnap
1 Min Read

ಅಮೇರಿಕಾವು ಟಿಬೇಟ್‌ನ ‘ದೇಶಭ್ರಷ್ಟ ಸರ್ಕಾರ’ಕ್ಕೆ ಅಮೇರಿಕಾವು ಮಾನ್ಯತೆ ನೀಡಿ ಟಿಬೇಟ್‌ನ ದೇಶ ಭ್ರಷ್ಟಸರ್ಕಾರದ ಮುಖ್ಯಸ್ಥರಿಗೆ ಆತಿಥ್ಯ ನೀಡಿದೆ. ಅಮೇರಿಕಾದ ಈ ನಡೆ ಚೀನಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಟಿಬೇಟ್‌ನ ದೇಶಭ್ರಷ್ಟ ಸರಗಕಾರದ ಅಧ್ಯಕ್ಷ ಲಾಬ್ಸಾಂಗ್ ಸಾಂಗೇ ಜೊತೆ, ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ವಾರ ನೇಮಿಸಿದ ವಿಶೇಷ ಸಂಯೋಜಕ ರಾಬರ್ಟ್. ಎ. ರೆಸ್ಟ್ರೋ ಅವರು ಸಂವಾದ ನಡೆಸಿದ್ದಾರೆ. ಚೀನಾ ಅಮೇರಿಕಾ ಸಂಯೋಜಕ ರಾಬರ್ಟ್ ಎ. ರೆಸ್ಟ್ರೋ ಅವರನ್ನು ವಿಶೇಷ ಸಂಯೋಜಕರಾಗಿ ನೇಮಕ ಮಾಡಿದ್ದನ್ನು ಚೀನಾ ತೀವ್ರವಾಗಿ ವಿರೋಧಿಸಿತ್ತು. ಅಮೇರಿಕ ತನ್ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೂ ಅಸಮಾಧಾನ ವ್ಯಕ್ತಪಡಿಸಿತ್ತು.

ಈ ಹಿಂದೆ ಬುಷ್, ಬಿಲ್ ಕ್ಲಿಂಟನ್, ಬರಾಕ್ ಒಬಾಮಾ ಅವರು ದಲೈ ಲಾಮಾ‌ ಅವರನ್ನು ಚೀನಾದ ವಿರೋಧದ ನಡುವೆಯೂ ಶ್ವೇತ ಭವನಕ್ಕೆ‌ ಕರೆಸಿ ಆತಿಥ್ಯ ನೀಡಿದ್ದರು.

ಈಗ ಟ್ರಂಪ್ ಅವರು ಟಿಬೇಟ್‌ನ ದೇಶಭ್ರಷ್ಟ ಸರ್ಕಾರದ ಅಧ್ಯಕ್ಷರಿಗೆ ಆತಿಥ್ಯ ನೀಡುವ ಮೂಲಕ ಟೊಬೇಟ್ ಸರ್ಕಾರಕ್ಕೆ ಮಾನ್ಯತೆ ನೀಡಿದೆ. ದಲೈ ಲಾಮಾ ಅವರು 1950-51 ರಲ್ಲಿ ಟಿಬೇಟ್‌ನ ಮೇಲೆ ದಾಳಿ ನಡೆಸಿದಾಗ, ದಲೈ ಲಾಮಾ ಅವರು ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದರು. ಆಗ ಹಿಮಾಚಲ ಪ್ರದೇಶದಲ್ಲಿ ಭಾರತವಾವರಿಗೆ ಆಶ್ರಯ ನೀಡಿತ್ತು. ನಂತರ ದಲೈ ಲಾಮಾ ಅವರೇ 1959 ಏಪ್ರಿಲ್ 29 ರಂದು ‘ಟಿಬೇಟ್ ದೇಶಭ್ರಷ್ಟ ಸರ್ಕಾರ’ವನ್ನು ರಚಿಸಿದ್ದರು. ಭಾರತ ಸರ್ಕಾರ ಈ ಟಿಬೇಟ್‌ನ ಈ ಸರ್ಕಾರಕ್ಕೆ ಅಧಿಕೃತವಾಗಿ ಮಾನ್ಯತೆ ನೀಡಿಲ್ಲವಾದರೂ, ‘ಅನಧಿಕೃತವಾಗಿ’ ಮಾನ್ಯತೆ ನೀಡಿದೆ.

ಅಮೇರಿಕಾ-ಚೀನಾ ಸಂಬಂಧ ಈಗ ವಿಷಮಗೊಂಡಿರುವದರಿಂದ ಅಮೇರಿಕ ಈ ನಡೆಯನ್ನು ಅನುಸರಿಸುತ್ತಿದೆ ಎಂದು ಹೇಳಲಾಗುತ್ತಿದೆ.

Share This Article
Leave a comment