February 21, 2026

Newsnap Kannada

The World at your finger tips!

acid dali

ಆ್ಯಸಿಡ್ ದಾಳಿ ಪ್ರಕರಣ – ಚೇತರಿಸಿಕೊಳ್ಳುತ್ತಿರುವ ಯುವತಿ: ತಂದೆ – ತಾಯಿ ಜೊತೆ ಮಾತು

Spread the love

ಬೆಂಗಳೂರಿನಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಯುವತಿಯ ಆರೋಗ್ಯದಲ್ಲಿ ಮಂಗಳವಾರ ಚೇತರಿಕೆ ಕಂಡಿದೆ.

ಸಂತ್ರಸ್ತೆಯ ತೊಡೆಯ ಭಾಗಕ್ಕೆ ಸರ್ಜರಿ ಮಾಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಆ್ಯಸಿಡ್ ದಾಳಿಯಿಂದ ಶೇ.40 ರಿಂದ ಶೇ.50 ರಷ್ಟು ಸುಟ್ಟುಹೋಗಿದ್ದ ಯುವತಿ ಸ್ಥಿತಿ ಗಂಭೀರವಾಗಿತ್ತು.

ಸೆಂಟ್ ಜಾನ್ ಆಸ್ಪತ್ರೆಯ ವೈದ್ಯರು ಯುವತಿಯ ಎರಡು ತೊಡೆ ಭಾಗದಲ್ಲಿ ಇನ್ಫೆಕ್ಷನ್ ಆಗದ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ಆ್ಯಸಿಡ್‍ನಿಂದ ಸುಟ್ಟಿದ ಡೆಡ್ ಸ್ಕಿನ್‍ನನ್ನು ತೆಗೆದಿದ್ದಾರೆ.

ಶಸ್ತ್ರಚಿಕಿತ್ಸೆ ಬಳಿಕ ಪ್ರಜ್ಞಾಹೀನಳಾಗಿದ್ದ ಯುವತಿಗೆ ಮಧ್ಯರಾತ್ರಿ ವೇಳೆಗೆ ಪ್ರಜ್ಞೆ ಬಂದಿದ್ದು, ಯುವತಿ ಪೋಷಕರ ಜೊತೆ ಮಾತನಾಡುತ್ತಿದ್ದಾಳೆ.

ಸದ್ಯ ಸೇಂಟ್ ಜಾನ್ಸ್ ಆಸ್ಪತ್ರೆ ಐಸಿಯುನಲ್ಲಿ ಯುವತಿಗೆ ಚಿಕಿತ್ಸೆ ಮುಂದುವರೆದಿದೆ. ಮತ್ತೊಂದೆಡೆ ಆ್ಯಸಿಡ್ ದಾಳಿಕೋರ ನಾಗೇಶ್‍ಗಾಗಿ ಕಾಮಾಕ್ಷಿಪಾಳ್ಯ  ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

error: Content is protected !!