ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ನಾನೇ ಕಾರಣ. ಎಂಟಿಬಿ ನಾಗರಾಜ, ರಮೇಶ್ ಜಾರಕಿಹೊಳೆ, ಡಾ. ಸುಧಾಕರ್, ಮಹೇಶ್ ಕುಮಟಳ್ಳಿ ಇವರು ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ನನ್ನಿಂದಲೇ. ಇನ್ನೂ ಐದು ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ರಡಿ ಇದ್ದಾರೆ ಎಂದು ನೆಲಮಂಗಲದ ಮಾಜಿ ಶಾಸಕ ಎಂ.ವಿ. ನಾಗರಾಜು ಹೇಳಿದರು.
ನೆಲಮಂಗಲ ತಾಲೂಕಿನ ಬಿಜೆಪಿ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಎಂಟಿಬಿ, ಜಾರಕಿಹೊಳೆ, ಡಾ. ಸುಧಾಕರ್, ಮಹೇಶ್ ಅವರನ್ನು ಬಿಜೆಪಿಗೆ ಸೇರುವಂತೆ ಸಂಪರ್ಕ ಮಾಡಿದ್ದು ನಾನೇ. ಆಗ ಯಡಿಯೂರಪ್ಪನವರು ವಲಸಿಗರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನ ನೀಡಯವುದಾಗಿ ಹೇಳಿದ್ದರು. ಹಾಗೆಯೇ ಚುಣಾವಣೆಯಲ್ಲಿ ಗೆದ್ದುಬಂದವರಿಗೆ ಅವರು ಸೂಕ್ತ ಸ್ಥಾನವನ್ನೂ ಸಹ ನೀಡಿದ್ದಾರೆ’ ಎಂದು ಹೇಳಿದರು.
‘ಇನ್ನೂ ಐದು ಜನ ಕಾಂಗ್ರೆಸ್ ಸೇರಲು ರೆಡಿ ಇದ್ದಾರೆ. ಆದರೆ ಬಿಎಸ್‌ವೈ ಅವರು ಸದ್ಯಕ್ಕೆ ಬೇಡ, ಮುಂದೆ ನೋಡೋಣ ಎಂದರು. ಈ ಬಾರಿಯ ಉಪ ಚುಣಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಬಹುಮತದೊಂದಿಗೆ ಗೆದ್ದು ಬರಲಿದೆ’ ಎಂದು ತಮ್ಮ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ