December 23, 2024

Newsnap Kannada

The World at your finger tips!

kumarswamy

ಕಾಂಗ್ರೆಸ್ ಯಾವುದೇ ನಾಟಕ ಜನರ ಹೃದಯ ಗೆಲ್ಲಲಾರವು – ಕುಮಾರಸ್ವಾಮಿ

Spread the love

ಚುಣಾವಣಾ ಸಮಯದಲ್ಲಿ ಬೇರೆ ಪಕ್ಷಗಳ ರಾಜಕೀಯ ಮುಖಂಡರನ್ನು ಸೆಳೆಯುವುದು ಕಾಂಗ್ರೆಸ್‌ಗೆ ಸಾಮಾನ್ಯವಾಗಿದೆ. ಆದರೆ ಜೆಡಿಎಸ್ ಮುಖಂಡರನ್ನು ಸಂಪೂರ್ಣವಾಗಿ ಸೆಳೆಯಲಾಗುವದಿಲ್ಲ. ಜೆಡಿಎಸ್ ಪಕ್ಷ ನಿಷ್ಠಾವಂತ ಮುಖಂಡ, ಕಾರ್ಯಕರ್ತ ದಿಂದ ಉಳಿಯಲಿದೆ.‌ ಕಾಂಗ್ರೆಸ್ ನಡೆಸುತ್ತಿರುವ ನಾಟಕ ಜನರ ಹೃದಯ ಗೆಲ್ಲುವುದಿಲ್ಲ ಎಂದು ಜೆಡಿಎಸ್ ಪಕ್ಷದ ನಾಯಕ ಹೆಚ್‌.ಡಿ. ಕುಮಾರಸ್ವಾಮಿ‌ ಗರಂ ಆಗಿ ಹೇಳಿದರು.

ಕಾಂಗ್ರೆಸ್ ನಾಯಕರು ಅವರ ಮನೆಗೆ ಭೇಟಿ‌ ನೀಡಿ ಜೆಡಿಎಸ್ ಪಕ್ಷವನ್ನು ಇಲ್ಲವಾಗಿಸುವದಾಗಿ ಬೆದರಿಕೆ ಹಾಕಿ ಹೋದ ಘಟನೆಯನ್ನು ಸುದ್ದಿಗಾರರೊಂದಿಗೆ‌ ಮಾತನಾಡಿದ ಎಚ್ ಡಿ ಕೆ, ‘ಕಾಂಗ್ರೆಸ್ ನಾಯಕರಿಂದ ಹೊಸ ನಾಟಕ ಶುರುವಾಗಿದೆ. ಆ ನಾಯಕರು ಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾದ ತಕ್ಷಣದಿಂದಲೇ ಮುಖಂಡರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿಂದೆ ಅವರು ಯಾರೆಲ್ಲರಿಗೆ ರಕ್ಷಣೆ ನೀಡಿದ್ದಾರೆ, ಜನರ ಕಷ್ಟಸುಖಕ್ಕೆ ಎಷ್ಟರಮಟ್ಟಿಗೆ ಭಾಗಿಯಾಗಿದ್ದಾರೆ, ಬೇರೆಯವರ ಹಿಂದೆ ಹೋಗಲು ಎಷ್ಟು ಕಾಣಿಕೆ ಇದೆ?’ ಎಂದೆಲ್ಲ ಡಿಕೆಶಿ ಅವರನ್ನು ಪರೋಕ್ಷವಾಗಿ ತಿವಿದಿದ್ದಾರೆ.

‘ಅವರು ಕನಕಪುರದಲ್ಲಿ‌ ಎಷ್ಟರ ಮಟ್ಟಿಗೆ ನ್ಯಾಯಬದ್ಧವಾಗಿ‌ ಚುಣಾವಣೆ ನಡೆಸಿದ್ದಾರೆ? ಎಷ್ಟು ಪರಿಶುದ್ಧತೆಯಿಂದಿದ್ದಾರೆ ಎಂಬುದರ ಅವಲೋಕನವನ್ನು ಅವರು ಮಾಡಲಿ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ನೊಂದಿಗೆ ಜೆಡಿಎಸ್ ಮೈತ್ರಿಯಾಗುವುದಿಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಆರ್‌ಆರ್‌ ನಗರದ ಕಾಂಗ್ರೆಸ್ ಅಭ್ಯರ್ಥಿಯ‌ ಮೇಲೆ ಚುಣಾವಣಾ ನೀತಿ‌ ಸಂಹಿತೆ ಉಲ್ಲಂಘನೆಯ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಹೆಚ್‌ಡಿಕೆ‌ ‘ಕಾಂಗ್ರೆಸ್ ಅಭ್ಯರ್ಥಿ ಮೇಲೆ ಎಫ್‍ಐಆರ್ ದಾಖಲಿಸಿರುವ ಬಗ್ಗೆ ರಾಜಕಾರಣ ಬೆರೆಸುವ ಅಗತ್ಯವಿಲ್ಲ.’ ಎಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!