ಮೈಸೂರು ಜಿಲ್ಲಾಧಿಕಾರಿಕಾರಿಯಾಗಿ ಮುಂದುವರಿಯುವಲ್ಲಿ ರೋಹಿಣಿ ಸಿಂಧೂರಿಯವರು ಮತ್ತೊಂದು ತಾತ್ಕಾಲಿಕ ಅವಕಾಶ ಸಿಕ್ಕಿದೆ. ಅಕ್ಟೋಬರ್ 16 ಕ್ಕೆ ಸಿಎಟಿ ನ್ಯಾಯಾಲಯವು ಪ್ರಕರಣ ಮುಂದೂಡಿದೆ.
ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ಬಿ. ಶರತ್ ತಮ್ಮ ವರ್ಗಾವಣೆ ಪ್ರಶ್ನೆ ಮಾಡಿ ಸಿಎಟಿಯ ಮೊರೆ ಹೋಗಿ ಅರ್ಜಿ ದಾಖಲು ಮಾಡಿದ್ದರು. ಶರತ್ ಅರ್ಜಿಯ ವಿಚಾರಣೆಯನ್ನು ಬುಧವಾರ ಸಿಎಟಿ ಕೈಗೆತ್ತಿಕೊಂಡಾಗ ಅನೇಕ ತಾಂತ್ರಿಕ ತೊಂದರೆಗಳುಂಟಾದವು.
ತಾಂತ್ರಿಕ ದೋಷಗಳ ಕಾರಣದಿಂದಾಗಿ ಆನ್‌ಲೈನ್ ಸಭೆಯಲ್ಲಿ ಇದ್ದ ಪ್ರತಿಯೊಬ್ಬರು ನೀಡುತ್ತಿದ್ದ ಹೇಳಿಕೆಗಳು ಅಸ್ಪಷ್ಟವಾಗಿ ಕೇಳಲಾರಂಭಿಸಿದವು. ಹಾಗಾಗಿ ಸಿಎಟಿ ವಿಚಾರಣೆಯನ್ನು ಅಕ್ಟೋಬರ್ 16ಕ್ಕೆ ಮುಂದೂಡಿತು.
ಮುಂದಿನ ವಿಚಾರಣೆಯಲ್ಲಿ ಖುದ್ದಾಗಿ ವಾದಿ-ಪ್ರತಿವಾದಿಗಳ ವಕೀಲರು ಕೋರ್ಟ್‌ನಲ್ಲಿ ಹಾಜರಿರುವಂತೆ ಆದೇಶಿಸಿದೆ. ಹೀಗಾಗಿ ಸದ್ಯ ರೋಹಿಣಿ ಸಿಂಧೂರಿ ಅವರು ವಿವಾದದಿಂದ ತಾತ್ಕಾಲಿಕ ಬಿಡುಗಡೆ ಪಡೆದಿದ್ದಾರೆ.
ಬೀಸೋ ದೊಣ್ಣೆಯಿಂದಲೂ ಪಾರಾಗಿದ್ದಾರೆ.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ