ಆರ್‌ಆರ್‌ ನಗರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಜೀನಾಮೆ: ಕಮಲ ಗಡಗಡ

Team Newsnap
1 Min Read

ಆರ್‌ಆರ್‌ ನಗರದ ಉಪಚುಣಾವಣೆಗೆ ಮುನಿರತ್ನ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ‌ ಬೆನ್ನಲ್ಲೇ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸಂದೇಶ್ ಬಂಡಪ್ಪ ತಮ್ಮ ರಾಜೀನಾಮೆ ನೀಡಿದ್ದಾರೆ.

ಸಂದೇಶ್ ಬಂಡೆಪ್ಪ ರಾಜ ರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ‌ ಅಧ್ಯಕ್ಷ ಶಿವಣ್ಣ ಗೌಡರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ’12 ವರ್ಷಗಳಿಂದ ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷದಲ್ಲಿ ನಿಷ್ಠಾವಂತರಾಗಿದ್ದ ತುಳಸಿ ಮುನಿರಾಜುಗೌಡರಿಗೆ ಟಿಕೆಟ್ ಸಿಗದ ಕಾರಣ ನಾನು ನೊಂದು ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ.

ತುಳಸಿ ಮುನಿರಾಜುಗೌಡ ಆರ್‌ಆರ್‌ ನಗರ ಉಪಚುಣಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಹೈಕಮ್ಯಾಂಡ್ ಈಗ ಮುನಿರತ್ನ ಅವರಿಗೆ ಟಿಕೇಟ್ ಕೊಟ್ಟಿರುವದರಿಂದ ಅನೇಕರಿಗೆ ಕಸಿವಿಸಿ ಉಂಟಾಗಿದೆ.

ಅಲ್ಲದೇ ತುಳಸಿ ಮುನಿರಾಜುಗೌಡ, ಮುನಿರತ್ನ ಅವರ ವಿರುದ್ಧ ಈ ಹಿಂದೆ ಆರ್‌ಆರ್‌ ನಗರದಲ್ಲಿ ನಡೆದ ಚುಣಾವಣೆಯಲ್ಲಿ ಅಕ್ರಮದಿಂದ ಗೆಲುವು ಸಾಧಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದರು. ಆದರೆ ಮುನಿರಾಜು ಗೌಡ ಅವರ ಅರ್ಜಿ ವಜಾ ಆಗಿತ್ತು. ಈ ಹಿನ್ನಲೆಯಲ್ಲಿ ಬಿಜೆಪಿ ಮುನಿರತ್ನ ಅವರಿಗೆ ಟಿಕೇಟ್ ನೀಡಿತ್ತು.

ಈಗ ಸಂದೇಶ್ ಬಂಡೆಪ್ಪ ನೀಡಿರುವ ರಾಜೀನಾಮೆ ಕಮಲ‌ ಪಾಳಯದಲ್ಲಿ ನಡುಕ‌ ಹುಟ್ಟಿಸಿದೆ. ಸಂದೇಶ್ ಅವರ ಈ ನಡೆ ಬಿಜೆಪಿಗೆ ಮುಳುವಾಗುವ ಸಾಧ್ಯತೆಯಿದೆ.

Share This Article
Leave a comment