ದೆಹಲಿಯ JNU ನಲ್ಲಿ ಮತ್ತೆ ರಣಾಂಗಣ – ಮಾಂಸಾಹಾರ ವಿಚಾರಕ್ಕೆ ವಿದ್ಯಾರ್ಥಿಗಳ ಮಾರಾಮಾರಿ

Team Newsnap
1 Min Read

ರಾಮನವಮಿ ದಿನವಾದ ನಿನ್ನೆ ಹಾಸ್ಟಲ್‍ನಲ್ಲಿ ಜೆಎನ್‍ಯು (JNU) ಮತ್ತು ಎಡಪಂಥೀಯರ ನಡುವೆ ಉಂಟಾದ ಸಂಘರ್ಷದಲ್ಲಿ ಹಲವು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ(ಜೆಎನ್‍ಯುಎಸ್‍ಯು) ಅಧ್ಯಕ್ಷೆ ಐಶೆ ಘೋಷ್ ಭಾನುವಾರ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಸದಸ್ಯರು ವಿದ್ಯಾರ್ಥಿಗಳನ್ನು ಕ್ಯಾಂಪಸ್‍ನಲ್ಲಿ ಮಾಂಸಾಹಾರ ತಿನ್ನುವುದನ್ನು ತಡೆದು ಹಿಂಸಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹಿನ್ನೆಲೆ ಎಬಿವಿಪಿ ಸದಸ್ಯರು ಸಂಜೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ

ಮೆಸ್ ಕಾರ್ಯದರ್ಶಿ ಮೇಲೂ ಎಬಿವಿಪಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಗಲಾಟೆ ವೇಳೆ ಎರಡು ಗುಂಪಿನ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಉಪ ಪೊಲೀಸ್ ಆಯುಕ್ತ ಮನೋಜ್.ಸಿ ತಿಳಿಸಿದ್ದಾರೆ.

ಎಐಎಸ್‍ಎ ಸದಸ್ಯರು ಈ ಘಟನೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ನರಳಡುತ್ತಿರುವ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳಲಾಗಿದೆ.

ಈ ವೀಡಿಯೋದಲ್ಲಿ, ವಿದ್ಯಾರ್ಥಿಗಳಿಗೆ ತೀವ್ರ ರಕ್ತಸ್ರಾವವಾಗಿದ್ದು, ಅವರು ನರಳಾಡುತ್ತಿರುವ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಎಬಿವಿಪಿ ಸದಸ್ಯರು ಗಾಯಗೊಂಡ ವಿದ್ಯಾರ್ಥಿಯ ವೀಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.

ಎಬಿವಿಪಿ ಸದಸ್ಯರು ಸಹ ಗಾಯಗೊಂಡ ವಿದ್ಯಾರ್ಥಿಯ ವೀಡಿಯೋ ಟ್ವೀಟ್ ಮಾಡಿದ್ದು ಎಡ ವಿದ್ಯಾರ್ಥಿಗಳು ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

Share This Article
Leave a comment