ಕೆಜಿಎಫ್-2 ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಶ್ರೀಕ್ಷೇತ್ರಗಳ ಭೇಟಿ ಆರಂಭಿಸಿದ್ದಾರೆ.
ಇಂದು ನಟ ಯಶ್ ಕುಕ್ಕೆ ಸುಬ್ರಹ್ಮಣ ಹಾಗೂ ಧರ್ಮಸ್ಥಳಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ.
ನಟ ಯಶ್ ಜೊತೆ ಕೆ.ಜಿ.ಎಫ್ ನಿರ್ಮಾಪಕ ವಿಜಯ್ ಕಿರಂಗದೂರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ, ಧರ್ಮಸ್ಥಳಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿ ಅಲ್ಲಿಂದ ರಸ್ತೆ ಮಾರ್ಗವಾಗಿ ಕುಕ್ಕೆಗೆ ತೆರಳಿದ್ದಾರೆ.
ಕುಕ್ಕೆಯಲ್ಲಿ ದೇವರ ದರ್ಶನ ಪಡೆದು ನಂತರ ಧರ್ಮಸ್ಥಳಕ್ಕೆ ಬಂದು ಮೊದಲು ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಈ ವೇಳೆ ಹೆಗ್ಡೆಯವರು ಯಶ್ ಬಳಿ ಸಿನಿಮಾದ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮಂಜುನಾಥನ ದರ್ಶನ ಪಡೆದು ಪುನೀತರಾದರು.
- ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು
- ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
- ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
More Stories
ಬಿಗ್ ಬಾಸ್ ತೆಲುಗು ಗೆದ್ದ ಮೈಸೂರಿನ ನಿಖಿಲ್ ಮಳಿಯಕ್ಕಲ್
ವಿಶ್ವದಾಖಲೆ ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ವಿಧಿವಶ
ಕಾಲ್ತುಳಿತದಲ್ಲಿ ಮಹಿಳೆ ಸಾವು: ನಟ ಅಲ್ಲು ಅರ್ಜುನ್ ಬಂಧನ