February 21, 2026

Newsnap Kannada

The World at your finger tips!

kenada

ಕೆನಡಾ ಕೂಡ ಈಗ ಸೇಫ್ ಅಲ್ಲ : ಭಾರತದ ವಿದ್ಯಾರ್ಥಿ ಗುಂಡೇಟಿಗೆ ಬಲಿ

Spread the love

ಭಾರತೀಯ ಮೂಲದ ವಿದ್ಯಾರ್ಥಿಯನ್ನು ದುಷ್ಕರ್ಮಿಯೊಬ್ಬ ಗುಂಡಿಟ್ಟು ಬರ್ಬರವಾಗಿ ಕೊಂದ ಘಟನೆ ಕೆನಡಾದ ಟೊರಂಟೊದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿಯಾದ ಕಾರ್ತಿಕ್ ವಾಸುದೇವ್ ಮೃತ ವಿದ್ಯಾರ್ಥಿ.

ಕಾರ್ತಿಕ್ ಶುಕ್ರವಾರ ಸಂಜೆ ಟೊರಂಟೊದ ಶೆನ್ ಬಾರ್ನೆ ಸಬ್ ವೇ ರೈಲು ನಿಲ್ದಾಣದ ಬಳಿ ತೆರಳುತ್ತಿದ್ದಾಗ ದುಷ್ಕರ್ಮಿಯೊಬ್ಬ ಮುಸುಕು ಹಾಕಿಕೊಂಡು ಬಂದಿದ್ದು, ವಿದ್ಯಾರ್ಥಿ ಮೇಲೆ ಮನಬಂದತೆ ಗುಂಡು ಹಾರಿಸಿದ್ದಾನೆ.

ಈ ವೇಳೆ ರೈಲ್ವೇ ನಿಲ್ದಾಣದ ಸಿಬ್ಬಂದಿ ಕಾರ್ತಿಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಕಾರ್ತಿಕ್ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.

ಮೃತ ವಿದ್ಯಾರ್ಥಿಯು ಟೊರಂಟೋದ ಸೆನೆಕಾ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು.

ಕಾರ್ತಿಕ್ ಅವರ ನಿಧನಕ್ಕೆ ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿ ಹಾಗೂ ಸೆನೆಕಾ ಕಾಲೇಜಿನ ಸಿಬ್ಬಂದಿ ವರ್ಗವೂ ಸಂತಾಪ ವ್ಯಕ್ತಪಡಿಸಿವೆ. ವಿದೇಶಾಂಗ ಸಚಿವ ಜೈ ಶಂಕರ್ ಕೂಡ ಸಂತಾಪ ಸೂಚಿಸಿದ್ದಾರೆ.

error: Content is protected !!