December 25, 2024

Newsnap Kannada

The World at your finger tips!

jagan reddy

ಆಂಧ್ರ ರಾಜಕೀಯದಲ್ಲಿ ದಿಢೀರ್ ಬದಲಾವಣೆ- CM ಜಗನ್ ಸಂಪುಟ ಸಚಿವರುಗಳ ರಾಜೀನಾಮೆ

Spread the love

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಮ್ಮ ಸಚಿವ ಸಂಪುಟವನ್ನು ​ ವಿಸರ್ಜನೆ ಮಾಡಿದ್ದಾರೆ.

24 ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ.

ಸಚಿವ ಸಂಪುಟ ಪುನರ್​ ರಚನೆ ಮಾಡುವ ಉದ್ದೇಶದಿಂದ ಜಗನ್ ಮೋಹನ್ ರೆಡ್ಡಿ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಏಪ್ರಿಲ್ 11 ರಂದು ಹೊಸ ಸಂಪುಟ ರಚನೆ ಆಗಲಿದೆ. ರಾಜಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿ.ಹರಿಚಂದ್ರನ್ ನೂತನ ಸಚಿವರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಿದ್ದಾರೆ.

ಏಪ್ರಿಲ್ 8 ರಂದು ನೂತನ ಸಚಿವರ ಪಟ್ಟಿಯನ್ನು ರಾಜ್ಯಪಾಲರಿಗೆ ಮುಖ್ಯಮಂತ್ರಿಗಳು ನೀಡಲಿದ್ದಾರೆ.

ಮೇ 30, 2019 ರಂದು ಜಗನ್ ಮೋಹನ್ ರೆಡ್ಡಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು.

Copyright © All rights reserved Newsnap | Newsever by AF themes.
error: Content is protected !!