February 21, 2026

Newsnap Kannada

The World at your finger tips!

brejel9

9 ಮಂದಿ ಮದುವೆಯಾದ ಮಾಡೆಲ್, ಒಬ್ಬಳಿಗೆ ಡಿವೋರ್ಸ್, ಮತ್ತಿಬ್ಬರನ್ನು ಮದುವೆಯಾಗುವ ಬಯಕೆ

Spread the love

ಬ್ರೆಜಿಲ್‍ನ ಮಾಡೆಲ್‍ವೊಬ್ಬ 9 ಮಂದಿ ಯುವತಿಯರನ್ನು ಮದುವೆಯಾಗಿದ್ದಾನೆ ಇದೀಗ ಅವರ ಪತ್ನಿಯಲ್ಲಿ ಒಬ್ಬರು ಡಿವೋರ್ಸ್ ಕೊಡಲು ಮುಂದಾಗಿದ್ದಾರೆ.

ಬ್ರೆಜಿಲ್‍ನ ಈ ಮಾಡೆಲ್ ಹೆಸರು ಆರ್ಥರ್ ಒ ಉರ್ಸೋ. 9 ಯುವತಿಯರನ್ನು ಏಕಕಾಲದಲ್ಲಿ ಮದುವೆಯಾಗಿದ್ದನು. ಹಾಗೆಯೇ ಇನ್ನೊಬ್ಬಳನ್ನು ವಿವಾಹವಾಗುವ ಮೂಲಕ 10 ಹೆಂಡಿರ ಮುದ್ದಿನ ಗಂಡನಾಗಬೇಕು ಎಂಬ ಕನಸನ್ನೂ ಹೊಂದಿದ್ದರು.

ಆದರೆ ಇವರ ಪತ್ನಿಯರಲ್ಲಿ ಒಬ್ಬರಾದ ಅಗಾಥಾ ಉರ್ಸೋರನ್ನು ಬಿಟ್ಟು ಹೊರಟಿದ್ದಾರೆ.

ಬ್ರೆಜಿಲ್‍ನಲ್ಲಿ ಬಹುಪತ್ನಿತ್ವಕ್ಕೆ ಅವಕಾಶ ಇಲ್ಲದೆ ಇದ್ದರೂ ಕೂಡ, ತಾನು ಬಹುಪತ್ನಿತ್ವವನ್ನೇ ಇಷ್ಟಪಡುತ್ತೇನೆ. ಏಕಪತ್ನಿತ್ವದ ವಿರುದ್ಧ ಪ್ರತಿಭಟಿಸುತ್ತೇನೆ. 10 ಪತ್ನಿಯರನ್ನು ಹೊಂದುವ ನನ್ನ ಕನಸನ್ನು ನನಸು ಮಾಡಿಕೊಳ್ಳದೆ ಬಿಡುವುದಿಲ್ಲ. ಆಕೆಯ ನಿರ್ಧಾರದಿಂದ ಬೇಸರಗೊಂಡಿದ್ದೇನೆ.

ಈ ಬಗ್ಗೆ ನೋವಾದರೂ ಡಿವೋರ್ಸ್‍ಗೆ ಸಮ್ಮತಿ ನೀಡುವುದಾಗಿ ಉರ್ಸೋ ಹೇಳಿಕೊಂಡಿದ್ದಾರೆ.

error: Content is protected !!