ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಪಿ.ಆರ್.ಕೆ ಪ್ರೊಡಕ್ಷನ್ (PRK production) ಕಡಿಮೆ ಸಮಯದಲ್ಲೇ ಹತ್ತು ಚಿತ್ರಗಳನ್ನು ಪೂರೈಸಿದೆ.
ಈ ಸಂಭ್ರಮಕ್ಕಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾವನ್ನು ಘೋಷಿಸಿ, ಈ ಬಾರಿ ಅವರು ಮಹಿಳಾ ನಿರ್ದೇಶಕಿಗೆ ಅವಕಾಶ ನೀಡಿದ್ದಾರೆ.
ಪಿ.ಆರ್.ಕೆ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ 10ನೇ ಚಿತ್ರಕ್ಕೆ ‘ಆಚಾರ್ ಅಂಡ್ ಕೋ’ ಎಂದು ಹೆಸರಿಡಲಾಗಿದೆ.
ಈ ಚಿತ್ರಕ್ಕೆ ಸಿಂಧು ಶ್ರೀನಿವಾಸ್ ಎಂಬ ನವ ನಿರ್ದೇಶಕಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪಿ.ಆರ್.ಕೆ ಬ್ಯಾನರ್ ಇದೇ ಮೊದಲ ಬಾರಿಗೆ ಮಹಿಳಾ ನಿರ್ದೇಶಕಿಯ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಿರ್ದೇಶಕರ ಚೊಚ್ಚಲು ಸಿನಿಮಾ ಇದಾಗಿದೆ.
ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ನಾನಾ ವಿಭಾಗಗಳಲ್ಲಿ ಬಹುತೇಕ ಮಹಿಳೆಯರೇ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬಿಂದುಮಾಲಿನಿ ಅವರ ಸಂಗೀತ ಸಂಯೋಜನೆ ಇದ್ದರೆ, ಕ್ರಿಯೇಟಿವ್ ಪ್ರೊಡ್ಯುಸರ್ ಡಾನ್ನಿಲಾ ಕೊರ್ರೆಯಾ, ಸ್ಟೈಲಿಸ್ಟ್ ಇಂಚರಾ ಸುರೇಶ್ ಇವರನ್ನೊಳಗೊಂಡಿದೆ ಚಿತ್ರತಂಡ.
ಸಿನಿಮಾಗಾಗಿ ವಿಶೇಷ ಕಥೆಗಾಗಿ 60ರ ದಶಕದಲ್ಲಿ ನಡೆದ ಘಟನೆಯನ್ನು ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ 60ರ ದಶಕದ ಬೆಂಗಳೂರನ್ನು ಪ್ರೇಕ್ಷಕರು ತೆರೆಯ ಮೇಲೆ ನೋಡಬಹುದಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್