ಯುವಕ ಮೇಕೆಗೆ ತಾಳಿ ಕಟ್ಟಿ ಶಾಸ್ತ್ರೋಕ್ತವಾಗಿ ಮದುವೆ ಆಗುವ ಮೂಲಕ ಅಚ್ಚರಿ ಮೂಡಿಸಿದ ಘಟನೆ ಆಂಧ್ರ ಪ್ರದೇಶದಲ್ಲಿ ಜರುಗಿದೆ.
ನಜಿವೀಡು ಮೂಲದ ಯುವಕನೊಬ್ಬ ಮದುವೆಯಾಗಲು ಕನ್ಯೆ ಹುಡುಕುತ್ತಿದ್ದ. ಈ ವೇಳೆ ಎಲ್ಲೂ ಕೂಡ ಕನ್ಯೆ ಸಿಗುತ್ತಿರಲಿಲ್ಲ. ಬಳಿಕ ಮನೆಯ ಹಿರಿಯರು ಜ್ಯೋತಿಷ್ಯರೊಬ್ಬರ ಬಳಿ ಯುವಕನ ಜಾತಕವನ್ನು ತೋರಿಸಿದ್ದಾರೆ.
ಜ್ಯೋತಿಷಿ ಯುವಕನ ಜಾತಕ ನೋಡಿ ಈತನಿಗೆ ಎರಡು ಮದುವೆ ಆಗುವ ಯೋಗ ಇದೆ ಎಂದು ಜ್ಯೋತಿಷ್ಯ ನುಡಿದಿದ್ದಾರೆ.
ಈ ಯುವಕ ಮದುವೆ ಆದರೂ ಕೂಡ ಮೊದಲನೇ ಹೆಂಡತಿ ಮರಣ ಹೊಂದುತ್ತಾಳೆ ಎಂದು ಜ್ಯೋತಿಷಿ ಭವಿಷ್ಯ ನುಡಿದಿದ್ದರು. ಈ ಮಾತು ಕೇಳಿ ಕುಟುಂಬದವರು ಈ ಸಮಸ್ಯೆಗೆ ಪರಿಹಾರ ಏನು ಎಂದು ಪ್ರಶ್ನಿಸಿದ್ದಾರೆ.
ಬಳಿಕ ಯುವಕ ಮೊದಲು ಮೇಕೆಯನ್ನು ಮದುವೆ ಆಗುವಂತೆ ಜ್ಯೋತಿಷಿ ಪರಿಹಾರ ಸೂಚಿಸಿದ್ದಾರೆ. ಇದನ್ನು ಕೇಳಿ ಯುವಕನ ಮನೆಯವರು ಯುವಕನಿಗೆ ಮೇಕೆಯೊಂದಿಗೆ ಮದುವೆ ಮಾಡಲು ತೀರ್ಮಾನಿಸಿದ್ದಾರೆ.
ಮೇಕೆಯನ್ನು ಕೂಡ ಹುಡುಕಿ ತಂದು ಯುಗಾದಿ ದಿನ ನವಗ್ರಹ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಮೇಕೆ ಜೊತೆ ಯುವಕನ ಮದುವೆ ನೆರವೇರಿಸಿದ್ದಾರೆ. ಮದುವೆಯಲ್ಲಿ ಯುವಕ, ಯುವಕನ ಪೋಷಕರು ಮತ್ತು ಅರ್ಚಕರು ಮಾತ್ರ ಭಾಗಿಯಾಗಿದ್ದರು. ಹೀಗೆ ಜ್ಯೋತಿಷಿ ಮಾತಿನಂತೆ ಯುವಕನಿಗೆ ಮೇಕೆ ಜೊತೆ ಮದುವೆ ಮಾಡಿ ದೋಷ ಪರಿಹಾರ ಮಾಡಿಸಿಕೊಂಡಿದ್ದಾರೆ.
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
- ಏಕಾದಶಿ ಉಪವಾಸದ ಬಗ್ಗೆ ವೈಜ್ಞಾನಿಕ ಚಿಂತನೆ ಏನು ಹೇಳುತ್ತದೆ?
More Stories
ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ