December 20, 2024

Newsnap Kannada

The World at your finger tips!

shivamani siddaganga

ಸಿದ್ದಗಂಗಾ ಮಠದಲ್ಲಿ 115 ಮಕ್ಕಳಿಗೆ ನಾಮಕರಣ : ಮುಸ್ಲಿಂ ದಂಪತಿಯ ಮಗು ‘ಶಿವಮಣಿ’

Spread the love

ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯ 115ನೇ ಜಯಂತಿಯ ಪ್ರಯುಕ್ತ 115 ಮಕ್ಕಳಿಗೆ ಶಿವಕುಮಾರ ಸ್ವಾಮೀಜಿಗಳ ಹೆಸರನ್ನ ಇಟ್ಟು ನಾಮಕರಣ ಮಾಡಲಾಯಿತು.

ಈ ನಾಮಕರಣದಲ್ಲಿ ಮುಸ್ಲಿಂ ಮಹಿಳೆ ತನ್ನ ಮಗುವಿಗೆ ಶಿವಮಣಿ ಹೆಸರು ಇಟ್ಟು ನಾಮಕರಣ ಮಾಡಿದ್ದಾರೆ. ಜೊತೆಗೆ ಮಕ್ಕಳಿಗೆ ಬೇಕಾದ ತೊಟ್ಟಿಲು ಸೇರಿದಂತೆ ಇತರೆ ಪರಿಕರಗಳ ವಿತರಣೆ ಮಾಡಲಾಯಿತು.

ರಾಜ್ಯದ ನಾನಾ ಭಾಗಗಳಿಂದ ಮಠಕ್ಕೆ ಬಂದಿದ್ದ ಮಕ್ಕಳಿಗೆ ನಾಮಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಡಾ.ಶಿವಕುಮಾರ ಮಹಾಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್ ನಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Copyright © All rights reserved Newsnap | Newsever by AF themes.
error: Content is protected !!