ರಾಜ್ಯದಲ್ಲಿ ಸಚಿವ ಸಂಪುಟ ಪುನರ್‌ರಚನೆ, ವಿಸ್ತರಣೆ ಬಗ್ಗೆ ನಂಗೆ ಮಾಹಿತಿ ಇಲ್ಲ, ಆದರೆ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಬಿಜೆಪಿ ಎಂಎಲ್‍ಸಿ ಹೆಚ್.ವಿಶ್ವನಾಥ್ ಹೇಳಿದರು.
ಬೆಳಗಾವಿ ಜಿಲ್ಲೆಯ ಗೋಕಾಕ್‍ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವಿಶ್ವನಾಥ್ ಅವರು, ಕ್ಯಾಬಿನೆಟ್ ಸಚಿವರು ಆಗುವ ಸಂದರ್ಭದಲ್ಲಿ ಅದನ್ನು ಮಣ್ಣು ಮಾಡಿದವರು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ. ಸಮ್ಮಿಶ್ರ ಸರ್ಕಾರದ ಪತನ, ಬಿಜೆಪಿ ಸರ್ಕಾರದ ಸ್ಥಾಪನೆ ಆ ಸಂದರ್ಭದಲ್ಲಿ ಎಷ್ಟೆಲ್ಲಾ ಆಯ್ತು. ಇದಾದ ಬಳಿಕ ನಮ್ಮನ್ನು ಎಂಎಲ್‍ಸಿ ಮಾಡುವಾಗ ನಮಗೆಲ್ಲಾ ಅನ್ಯಾಯ ಆಯ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನ ಸಭೆ ಆಯ್ಕೆಯಾಗಿ ನಾನು ಕೌನ್ಸಿಲ್‍ಗೆ ಬರಬೇಕಾಗಿತ್ತು. ಅದನ್ನು ತಪ್ಪಿಸಿ ನಮ್ಮನ್ನು ನಾಮನಿರ್ದೇಶನ ಮಾಡಿದರು. ನಾಮನಿದೇಶನವಾದ ಸದಸ್ಯರಿಗೆ ಮಂತ್ರಿಯಾಗುವ ಯೋಗವಿಲ್ಲ. ಸುಪ್ರೀಂ ಕೋರ್ಟ್ ತೂಗುಗತ್ತಿ ಇದೆ. ಅದು ಗೊತ್ತಿದ್ದು ಕೂಡ ನಮಗೆ ಅನ್ಯಾಯವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ನಮ್ಮನ್ನು ಕಡೆಗಣನೆ ಮಾಡುತ್ತಿಲ್ಲ , ಮಾಡಿಲ್ಲ. ಬಿಜೆಪಿ ನಾಯಕರು ನಮ್ಮನ್ನು ಕಡೆಗಣನೆ ಮಾಡುತ್ತಿದ್ದಾರೆ. ಯಾರು ಯಾವುದೇ ಪಕ್ಷವನ್ನು ಆಪಾದನೆ ಮಾಡಬಾರದು. ಪಕ್ಷಗಳು ಎಲ್ಲವೂ ಚೆನ್ನಾಗಿರುತ್ತಾವೆ. ಪಕ್ಷ ನಡೆಸುವವರಿಂದ ಪಾರ್ಟಿಗಳು ಹಾಳಾಗುತ್ತಿವೆ. ಪಕ್ಷದ ಸಿದ್ದಾಂತಗಳು ಚೆನ್ನಾಗಿರುತ್ತವೆ ಪಕ್ಷ ಹಾಳು ಮಾಡುವವರು ನಾಯಕರು ಎಂದು ಕಿಡಿಕಾರಿದರು.
2023ರ ನಂತರ ನಮಗೆ ಶಾಪ ವಿಮೋಚನೆ ಆಗುತ್ತೆ. ಈ ಕಾರಣಕ್ಕೆ ಸದ್ಯ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸರ್ಕಾರದ ಜೊತೆಗೆ ಕೆಲಸ ಮಾಡುತ್ತೇನೆ. ನಾನು ಸಚಿವ ಸ್ಥಾನ ನೀಡುವಂತೆ ಯಾರಿಗೂ ಸಪೋರ್ಟ್ ಮಾಡಲ್ಲ. ರಮೇಶ್ ಜಾರಕಿಹೊಳಿ ನಮ್ಮ ಸ್ನೇಹಿತರು. ಬಿಜೆಪಿ ಸರ್ಕಾರ ಸ್ಥಾಪನೆಗೆ ಅವರು ಕೂಡ ಪ್ರಮುಖ ಕಾರಣರಾದವರು.
ಹೈಕಮಾಂಡ್ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತೆ ನೋಡೋಣ. ರಾಜಕಾರಣದಲ್ಲಿ ಕೃತಜ್ಞತೆ ಪದಕ್ಕೆ ಅರ್ಥ ಇಲ್ಲದಂತಾಗಿದೆ. ಕೃತಜ್ಞತೆ ಇಲ್ಲದ ಜನನಾಯಕರಾಗುತ್ತಿದ್ದೇವೆ ನಾವು. ಮುಂಬರುವ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರಲು ದುಡಿಯುತ್ತೇವೆ ಎಂದರು.
- ಚನ್ನಪಟ್ಟಣ: 4 ನೇ ಸುತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
More Stories
ಚನ್ನಪಟ್ಟಣ: 4 ನೇ ಸುತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ