ಪಾಕಿಸ್ತಾನದಲ್ಲಿ ಈಗ ರಾಜಕೀಯ ಅರಾಜಕತೆ ತಾಂಡವಾಡ್ತಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕುರ್ಚಿ ಅಲುಗಾಡಲು ಶುರುವಾಗಿದೆ, ಇನ್ನು 7 ದಿನಗಳಲ್ಲಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ.
ನಾಳೆಯಿಂದ ಅವಿಶ್ವಾಸ ನಿರ್ಣಯ ಪ್ರಕ್ರಿಯೆ ಆರಂಭವಾಗಲಿದೆ. ಇಮ್ರಾನ್ ಖಾನ್ 2018ರಲ್ಲಿ ಬಹುಮತದೊಂದಿಗೆ ಪಾಕ್ ಆಡಳಿತದ ಚುಕ್ಕಾಣಿ ಹಿಡಿದಿದ್ದರು.
ಇಮ್ರಾನ್‌ಗೆ ವಿಶ್ವಾಸದ ಸವಾಲ್ ಎದುರಾಗಿದೆ. 3 ವರ್ಷಗಳ ಹಿಂದೆ ಪ್ರಧಾನಿ ಹುದ್ದೆಗೇರಿದ್ದ ಮಾಜಿ ಕ್ರಿಕೆಟಿಗನ ವಿರುದ್ಧ ಅವರದ್ದೇ ಪಕ್ಷದ ಸದಸ್ಯರು ಪಿತೂರಿ ಮಾಡಿದ್ದಾರೆ. 24 ಸಂಸದರು ಪಕ್ಷಾಂತರ ಮಾಡಿದ್ದಾರೆ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಲು ತಯಾರಾಗಿವೆ.
ವಿದೇಶಾಂಗ ನೀತಿ ಹಾಗೂ ಹಣದುಬ್ಬರ ನಿಭಾಯಿಸುವಲ್ಲಿ ಪ್ರಧಾನಿ ಇಮ್ರಾನ್ ವಿಫಲರಾಗಿದ್ದಾರೆ ಎಂಬುದು ವಿಪಕ್ಷಗಳು ಆರೋಪ . ಈಗಾಗಲೇ ಸ್ಪೀಕರ್‌ಗೆ ಅವಿಶ್ವಾಸ ನಿರ್ಣಯದ ಪ್ರತಿ ನೀಡಿವೆ.
ನಾಳೆ ಸಂಸತ್‌ನಲ್ಲಿ ನಿರ್ಣಯ ಮಂಡಿಸಲಿದ್ದು, 7 ದಿನಗಳ ಕಾಲ ಪ್ರಕ್ರಿಯೆ ನಡೆಯಲಿದೆ. ಅವಿಶ್ವಾಸಕ್ಕೂ ಮುನ್ನ ಇಮ್ರಾನ್‌ಗೆ ಮತ್ತೊಂದು ಬಹುದೊಡ್ಡ ಹೊಡೆತ ಬಿದ್ದಿದೆ. ಇಂದು ಮೂರು ಪ್ರಮುಖ ಮಿತ್ರ ಪಕ್ಷಗಳು ದೂರ ಸರಿದಿವೆ.
ಪಾಕಿಸ್ತಾನ ಮುಸ್ಲಿಂ ಲೀಗ್, ಬಲೂಚಿಸ್ತಾನ್ ಅವಾಮಿ ಪಾರ್ಟಿ, ಹಾಗೂ ಮುತ್ತಹಿದಾ ಕ್ವಾಮಿ ಮೂವ್ಮೆಂಟ್ ಪಾಕಿಸ್ತಾನ ಪಕ್ಷಗಳು ಬೆಂಬಲ ಹಿಂಪಡೆದಿವೆ.
ಪಾಕ್ ಸರ್ಕಾರ ಅಲ್ಲಿನ ಸೇನೆಯ ಕೈಗೊಂಬೆ. ಸೇನೆ ಹೇಳಿದ್ದಂತೆ ಕೇಳದಿದ್ರೆ ಉಳಿಗಾಲವೇ ಇಲ್ಲ. ಈಗ ಇಮ್ರಾನ್‌ಗೂ ಅದೇ ಆಗಿರೋದು ಅಂತ ಪಾಕ್ ರಾಜಕೀಯ ತಜ್ಞರು ವಿಶ್ಲೇಷಣೆ ಮಾಡ್ತಿದ್ದಾರೆ.
ಸೇನೆ ಮಾತ್ರ ರಾಜಕೀಯದಲ್ಲಿ ತಲೆ ಹಾಕಲ್ಲ ಅಂತ ಬಾಯಿಮಾತಿಗಷ್ಟೇ ಹೇಳಿದೆ. ಈವರೆಗೆ ಯಾವುದೇ ಪಾಕ್ ಪ್ರಧಾನಿ ಅವಧಿ ಪೂರೈಸಿದ ನಿದರ್ಶನವೇ ಇಲ್ಲ. ಈಗ ಇಮ್ರಾನ್ ಖಾನ್ ಸರದಿ. ಅದೇ ಆ ರಾಷ್ಟ್ರದ ಸೇನೆಯ ದೊಡ್ಡ ತಂತ್ರ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ