ಗೊಂದಲ, ಸಮಸ್ಯೆಗಳು ಏನೇ ಇದ್ದರೂ, ನಾವಿಬ್ಬರೂ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ. ಕೆ.ಕಲ್ಯಾಣ್ ಜೊತೆಗೆ ದಾಂಪತ್ಯ ಜೀವನ ಮುಂದುವರಿಸುತ್ತೇನೆ. ಮುರಿಯೋಲ್ಲಾ ಎಂದು ಗೀತರಚನೆಕಾರ ಕೆ.ಕಲ್ಯಾಣ್, ಪತ್ನಿ ಅಶ್ವಿನಿ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಶ್ವಿನಿ ಅವರು, ‘ಪತಿಯನ್ನು ಸದ್ಯದಲ್ಲೇ ಭೇಟಿಯಾಗುತ್ತೇನೆ. ಯಾವುದೋ ಕೆಟ್ಟ ಘಳಿಗೆಯಿಂದ ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿದೆ. ನಮ್ಮ ಕುಟುಂಬ ಯಾವುದೋ ಸುಳಿಯಲ್ಲಿ ಸಿಲುಕಿಕೊಂಡಿತ್ತು. ಗಂಗಾ ಕುಲಕರ್ಣಿ ಹಾಗೂ ಶಿವಾನಂದ ವಾಲಿ ನಮ್ಮನ್ನು ವಶೀಕರಣ ಮಾಡಿಕೊಂಡಿದ್ದರು. ನನ್ನ, ತಂದೆ ಹಾಗೂ ತಾಯಿಯ ಆಸ್ತಿ ಬರೆಸಿಕೊಂಡಿದ್ದರು. ಪ್ರಾಣ ಉಳಿಸಿಕೊಳ್ಳಲು ಪೂಜೆ ಮಾಡಿಸಬೇಕು ಎಂದು ಅವರಿಬ್ಬರೂ ಹೇಳಿದ್ದರು. ಅವರಿಗೆ ಪೂಜೆಗೆಂದು ಹಣ ಕೊಡುತ್ತಿದ್ದೆವು. ಆದರೆ, ನಾವು ಪಾಲ್ಗೊಳ್ಳುತ್ತಿರಲಿಲ್ಲ. ಅದೆಂತಹ ಪೂಜೆ ಮಾಡುತ್ತಿದ್ದರೋ ಗೊತ್ತಿಲ್ಲ. ಈಗ ಅದೆಲ್ಲದರಿಂದ ಸಂಪೂರ್ಣವಾಗಿ ಹೊರಬಂದಿದ್ದೇವೆ’ ಎಂದರು.
‘ಬೆಳಗಾವಿ ಪೊಲೀಸರು ಪರಿಸ್ಥಿತಿಯನ್ನು ಚೆನ್ನಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ದೇವರ ರೂಪದಲ್ಲಿ ಬಂದು ಕಾಪಾಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಾನೂನಿನಿಂದ ನಮಗೆ ಸಹಾಯ ದೊರೆತಿದೆ. ಯಾರನ್ನಾದರೂ ಮನೆಗೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಂದುವರಿಯಬೇಕು’ ಎಂದು ಸಲಹೆ ನೀಡಿದರು.
More Stories
ನಾಳೆ ರಾಜ್’ಘಾಟ್ನಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಂತ್ಯಸಂಸ್ಕಾರ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ