January 4, 2025

Newsnap Kannada

The World at your finger tips!

pm v

‘ಗುಜರಾತ್ ಫೈಲ್ಸ್’ ಚಿತ್ರ ಮಾಡುವೆ ನೀವು ತಡೆಯಬೇಡಿ :ಮೋದಿಗೆ ಸವಾಲು ಹಾಕಿದ ನಿರ್ದೇಶಕ

Spread the love

‘ ದಿ ಕಾಶ್ಮೀರ್ ಫೈಲ್ಸ್ ‘ ಸಿನಿಮಾ ರಿಲೀಸ್ ಬೆನ್ನಲ್ಲೇ, ಈ ಚಿತ್ರವನ್ನು ವಿರೋಧಿಸಿದ್ದ ಕೆಲವರು ‘ದಿ ಗುಜರಾತ್ ಫೈಲ್ಸ್’ ಸಿನಿಮಾ ಯಾವಾಗ? ಎಂದು ಪ್ರಶ್ನೆ ಮಾಡಿದ್ದರು. ಅದನ್ನೇ ಸವಾಲಾಗಿ ಸ್ವೀಕರಿಸಿರುವ ಬಾಲಿವುಡ್ ನಿರ್ದೇಶಕ ವಿನೋದ್ ಕಾಪ್ರಿ (Vinod Kaapri)“ನಾನು ಗುಜರಾತ್ ಫೈಲ್ ಸಿನಿಮಾ ಮಾಡಲು ತಯಾರಿ ಮಾಡಿಕೊಂಡಿದ್ದೇನೆ.

ಈ ಕುರಿತು ನಿರ್ಮಾಪಕರ ಜತೆ ಮಾತುಕತೆ ಕೂಡ ಆಗಿದೆ. ಈ ಸಿನಿಮಾದಲ್ಲಿ ಪ್ರಧಾನಿ ಮೋದಿ ಅವರ ಪಾತ್ರವು ವಿವರವಾಗಿ ಇರಲಿದೆ. ಈ ಚಿತ್ರವನ್ನು ತಾವು ತಡೆಯುವುದಿಲ್ಲ ಎಂದು ರಾಷ್ಟ್ರಕ್ಕೆ ಭರವಸೆ ಕೊಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನೆ ಮಾಡಿದ್ದಾರೆ.

ದಿ ಗುಜರಾತ್ ಫೈಲ್ಸ್ ಸತ್ಯ ಘಟನೆಯನ್ನೇ ಆಧರಿಸಿದೆ. ಅದಕ್ಕಾಗಿ ನಾನೂ ಕೂಡ ಸಂಶೋಧನೆ ಮಾಡಿದ್ದೇನೆ. ಸತ್ಯ ಮತ್ತು ಪ್ರಾಮಾಣಿಕವಾಗಿ ಈ ಸಿನಿಮಾ ಮಾಡುವೆ. ಪ್ರಧಾನಿ ಅವರು ಹೇಳುವಂತೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವು ನನಗೂ ಬೇಕು. ಅದನ್ನು ಪ್ರಧಾನಿಗಳು ನಮ್ಮ ಚಿತ್ರಕ್ಕೂ ಕೊಟ್ಟರೆ ಅತೀ ಶೀಘ್ರದಲ್ಲೇ ಈ ಸಿನಿಮಾ ಶುರು ಮಾಡುವುದಾಗಿ ಅವರು ಟ್ವಿಟ್ ಮಾಡಿದ್ದಾರೆ. ನಿರ್ದೇಶಕ ವಿನೋದ್ ಕಾಪ್ರಿ ಮಾಡಿರುವ ಈ ಟ್ವೀಟ್ ಭಾರೀ ವೈರಲ್ ಆಗಿದೆ. ಅಲ್ಲದೇ, ಅವರು ಕೇಳಿರುವ ಪ್ರಶ್ನೆಯನ್ನು ವಿನೋದ್ ಬೆಂಬಲಿಗರು ಕೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!