December 23, 2024

Newsnap Kannada

The World at your finger tips!

bhagavan vb 91

ವಿಚಾರವಾದಿ ಭಗವಾನ್‌ ರಕ್ಷಣೆ ರದ್ದು ಪಡಿಸುವಂತೆ ಒತ್ತಾಯ

Spread the love

ಸಿದ್ದರಾಮಯ್ಯನವರ ಸಿಎಂ ಆಗಿದ್ದ‌ ವೇಳೆಯಲ್ಲಿ ವಿಚಾರವಾದಿ ಕೆ.ಎಸ್. ಭಗವಾನ್ ಅವರಿಗೆ ನೀಡಿದ್ದ ಪೋಲೀಸ್ ರಕ್ಷಣೆಯನ್ನು ರದ್ದು ಮಾಡುವಂತೆ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿಯ ರಾಜ್ಯಾಧ್ಯಕ್ಷ ಡಾ. ಸುಧಾಕರ ಹೊಸಳ್ಳಿ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ಡಾ. ಹೊಸಳ್ಳಿ, ‘ಸಂವಿಧಾನ ಉಲ್ಲಂಘನೆಯ ಮುಖಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ತರುತ್ತಿರುವ ಕೆಎಸ್ ಭಗವಾನ್ ಇವರಿಗೆ ನೀಡಿರುವ ಸರ್ಕಾರಿ ರಕ್ಷಣೆಯನ್ನು ಹಿಂಪಡೆಯಲು ಹಾಗೂ ನಿವೃತ್ತಿ ವೇತನ ತಡೆಹಿಡಿಯಬೇಕು. ಕೆಎಸ್ ಭಗವಾನ್ ಹಲವು ವರ್ಷಗಳಿಂದ ಸಂವಿಧಾನದ 19ನೇ ವಿಧಿಯ ಒಂದನೇ ಉಪವಿಧಿ ಅನುಸಾರ ಅಭಿವ್ಯಕ್ತಿ ಸ್ವಾತಂತ್ರ್ಯದಡಿಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಗಲುವಂತೆ ಮಾತನಾಡುತ್ತ ಬಂದಿರುವುದು ಸ್ಪಷ್ಟವಾಗಿ ಸಂವಿಧಾನದ ಉಲ್ಲಂಘನೆಯಾಗಿದೆ’ ಎಂದು ಹೇಳಿದ್ದಾರೆ.

‘ಸಂವಿಧಾನದ 19 ನೇ ವಿಧಿಯ ಎರಡನೇ ಉಪ ವಿಧಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಬೇರೊಬ್ಬರ ಸ್ವಾತಂತ್ರ್ಯವನ್ನು ಮೊಟಕುಗೊಳಿಸಬಾರದು ಎಂಬ ನಿರ್ಬಂಧವನ್ನು ಹೇರಲಾಗಿದೆ. ಆದರೂ ಭಗವಾನ್ ನಿರಂತರವಾಗಿ ಡಾ ಬಿ ಆರ್ ಅಂಬೇಡ್ಕರ್ ಹಿಂದುಗಳಿಗೆ ನೀಡಿರುವ ಸಾಂವಿಧಾನಿಕ ಧಾರ್ಮಿಕ ಹಕ್ಕುಗಳನ್ನು (25,26,27,28 ನೇ ವಿಧಿಗಳು) ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತಾ ಬಂದಿದ್ದಾರೆ. ಇದು ಸಂವಿಧಾನದ ಉಲ್ಲಂಘನೆಯಾಗಿದೆ. ಕಳೆದ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ, ದುರುದ್ದೇಶದಿಂದ ಈ ವ್ಯಕ್ತಿಗೆ, ಸರ್ಕಾರಿ ಪೊಲೀಸ್ ರಕ್ಷಣೆಯನ್ನು ನೀಡಿತ್ತು . ಭಗವಾನ್ ಅವರು ಅವಕಾಶವನ್ನು ಬಳಸಿಕೊಂಡು ಭಗವಾನ್ ಹಿಂದೂಗಳನ್ನು ಹೀಯಾಳಿಸುವಂತೆ, ಪ್ರಚೋದನಕಾರಿಯಾಗಿ, ‘ಹಿಂದೂ ಎಂಬ ಪದವೇ ಅವಮಾನಕರ ಅದನ್ನು ತೆಗೆಯಬೇಕು ಎಂಬ ಹೇಳಿಕೆ’ ಎಂದು ಮಾತನಾಡುತ್ತ ಮಾತನಾಡುತ್ತ ಸಂವಿಧಾನಿಕ ಹಕ್ಕುಗಳನ್ನು ಖಂಡಿಸುತ್ತಾ ಬಂದಿದ್ದಾರೆ. ಸಂವಿಧಾನದ ಹಕ್ಕುಗಳ ಉಲ್ಲಂಘನೆಯೆಂದರೆ ಅದು ಅಂಬೇಡ್ಕರ್ ಅವರಿಗೆ ಮಾಡುವ ಅಪಮಾನ. ಸರ್ಕಾರಕ್ಕೆ ಮಾಡುವ ಅವಮಾನ ಭಗವಾನ್ ತಮ್ಮ ಪ್ರಚಾರದ ಗೀಳಿಗೆ ಬಹುಸಂಖ್ಯಾತ ಹಿಂದೂ ಧರ್ಮೀಯರನ್ನು ನಿಂದನೆ ಮಾಡುವುದು ಸೂಕ್ತವಲ್ಲ’ ಎಂದು ಭಗವಾನ್ ಅವರ ಮೇಲೆ ಹರಿಹಾಯ್ದಿದ್ದಾರೆ.

ಸರ್ಕಾರ ಆತನ ಸರ್ಕಾರಿ ರಕ್ಷಣೆಯನ್ನು ಸಂವಿಧಾನದ 19 ನೇ ವಿಧಿಯ ಎರಡನೇ ಉಪ ವಿಧಿಯನ್ವಯ ಕೂಡಲೇ ಪಡೆಯದಿದ್ದರೆ ಭಗವಾನ್ ಅವರ ನಡುವಳಿಕೆ, ಸಂವಿಧಾನಕ್ಕೆ ಮಾಡುವ ಅಪಮಾನ ಸರ್ಕಾರ ಪ್ರಾಯೋಜಕತ್ವವೇ ಆಗುತ್ತದೆ.’ ಅಲ್ಲದೇ ಭಗವಾನ್
ಮೈ ಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ. ಕೆಸಿಎಸ್ಆರ್ ನಿಯಮಗಳು ಪ್ರಸ್ತುತ ಅನ್ವಯವಾಗದಿದ್ದರೂ, ಜನರ ತೆರಿಗೆ ಹಣದಲ್ಲಿ ಜೀವನ ನಿರ್ವಹಣೆಗಾಗಿ ನಿವೃತ್ತಿ ವೇತನವನ್ನು ಸರ್ಕಾರ ನೀಡುತ್ತಿರುವುದು ಸಾಂವಿಧಾನಿಕ ನಿಯಮಗಳ ಅಡಿಯಲ್ಲಿಯೇ. ಹೀಗಾಗಿ ಸರ್ಕಾರ, ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುವವರು ತಮ್ಮ ಹಕ್ಕು ಚಲಾವಣೆಗೆ ಅರ್ಹರಾಗಿರುವುದಿಲ್ಲ‌. ಉನ್ನತ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿ, ನಿವೃತ್ತಿವೇತನ ತಡೆಹಿಡಿಯಲು ನಿರ್ದೇಶನ ನೀಡಬೇಕೆಂದು ಸಮಿತಿಯು ಒತ್ತಾಯಿಸುತ್ತದೆ’ ಎಂದು ಕಿಡಿ ಕಾರಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!