ಪಾಕಿಸ್ತಾನ ನಮಗೆ ಬೇಡ: ಗಿಲ್ಗಿಟ್ ಬಲ್ಟಿಸ್ತಾನ್ ಪ್ರತಿಭಟನೆ

Team Newsnap
1 Min Read

ಪಾಕ್ ಅಕ್ರಮಿತ ಕಾಶ್ಮೀರಕ್ಕೆ ಸೇರಿರುವ ಗಿಲ್ಗಿಟ್ ಬಲ್ಟಿಸ್ತಾನ್ ತನಗೆ ಪಾಕ್ ಆಡಳಿತ ಬೇಡ ಎಂದು ಪ್ರತಿಭಟನೆ ನಡೆಸುತ್ತಿದೆ.

ಗಿಲ್ಗಿಟ್ ಪ್ರದೇಶದಲ್ಲಿ ಪಾಕ್ ಸೈನಿಕರ ಮಿತಿ ಮೀರಿದ ದೌರ್ಜನ್ಯ, ವಿನಾಕಾರಣ ರಾಜಕಾರಣಿಗಳ ಬಂಧನ ಹಾಗೂ ಸಿಪೆಕ್ (ಚೈನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್) ಯೋಜನೆಯನ್ನು ವಿರೋಧಿಸಿ ಅಲ್ಲಿನ ಜನರು ಪ್ರತಿಭಟನೆ ಕೈಗೊಂಡಿದ್ದಾರೆ.
ಈ ಪ್ರತಿಭಟನೆ ಎಷ್ಟು ಮಹತ್ವ ಪಡೆದುಕೊಂಡಿದೆಯೆಂದರೆ, ಪೋಲೀಸರೇ ಪ್ರತಿಭಟನಾಕಾರರಿಗೆ ತಮ್ಮ ಬೆಂಬಲ ನೀಡುತ್ತಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದ ಒಂದು ಭಾಗವಾದ ಗಿಲ್ಗಿಟ್ ಬಲ್ಟಿಸ್ತಾನದಲ್ಲಿ ದಿನೇ ದಿನೇ ಪಾಕ್ ದೌರ್ಜನ್ಯ ಮುಗಿಲು ಮುಟ್ಟುತ್ತಿದೆ. ಪಾಕ್ ಸೈನಿಕರು ವಿನಾಕಾರಣ ಆ ಪ್ರದೇಶದ ಜನರ ಮೇಲೆ ಅವ್ಯಾಹತವಾಗಿ ಹಲ್ಲೆ ಮಾಡುತ್ತಿದ್ದಾರೆ. ಇದರ ಜೊತೆ ಯಾವುದೇ ಸ್ಪಷ್ಟ ಕಾರಣ ನೀಡದೇ ಸ್ಥಳೀಯ ರಾಜಕಾರಣಿಗಳು, ಜನಪ್ರತಿನಿಧಿಗಳನ್ನು ಪಾಕಿಸ್ತಾನ ಬಂಧನ ಮಾಡುತ್ತಿದೆ‌. ಅವರನ್ನು ಬಿಡುಗಡೆಗೊಳಿಸುವಂತೆ ಹೇಳುತ್ತಿದೆ.

ಪ್ರತಿಭಟನೆಗೆ ಮತ್ತೊಂದು ಮಹತ್ವದ ಕಾರಣವೆಂದರೆ, ಚೈನಾ-ಪಾಕಿಸ್ತಾನ ಎಕಾನಮಿ ಕಾರಿಡಾರ್ ಯೋಜನೆ. ಈ ಯೋಜನೆ ರಸ್ತೆ ಇದೇ ಪ್ರದೇಶದಲ್ಲಿ ಹಾದು ಹೋಗುವುದರಿಂದ ಅಲ್ಲಿನ ಜನರನ್ನು ಸ್ಥಾಳಂತರ ಮಾಡುವ ಹೆದರಿಕೆ ಇದೆ. ಹಾಗಾಗಿ ಸಿಪೆಕ್ ಯೋಜನೆ ನಿಲ್ಲಿಸುವಂತೆ ಅಲ್ಲಿನ ಜನ ಪ್ರತಿಭಟನೆ ನಡೆಸುತ್ತಿದ್ದಾರೆ.

ಆದರೆ ಪಾಕಿಸ್ತಾನಕ್ಕೆ ಗಿಲ್ಗಿಟ್ ಬಲ್ಟಿಸ್ತಾನದ ಬೇಡಿಕೆಗಳು ತುಂಬಾ ಅಪಾಯಕಾರಿಯಾಗಿ ಕಾಣಿಸುತ್ತಿವೆ. ಒಂದು ವೇಳೆ ಗಿಲ್ಗಿಟ್ ಪ್ರದೇಶದ ಬೇಡಿಕೆಗಳನ್ನು ಈಡೇರಿಸಿದಲ್ಲಿ ಪಾಕಿಸ್ತಾನದ ಬಲವನ್ನೂ, ಅದರ ಸರ್ವಾಧಿಕಾರತ್ವಕ್ಕೆ ಸಂಚಕಾರ ಬರುವುದಂತೂ ನಿಜ. ಪಾಕಿಸ್ತಾನಕ್ಕೆ ಮತ್ತೊಂದು ದೊಡ್ಡ ತಲೆ‌ನೋವೆಂದರೆ ಗಿಲ್ಗಿಟ್‌ನ ಸ್ಥಳೀಯ ಪೋಲೀಸರೇ ಪ್ರತಿಭಟನೆಯನ್ನು‌ಬೆಂಬಲಿಸುತ್ತಿದ್ದಾರೆ.

ಹಾಗಾಗಿ‌ ಪಾಕಿಸ್ತಾನವು ಪಂಜಾಬ್ ಪ್ರಾಂತ್ಯದಿಂದ ಪೋಲೀಸ್ ತುಕಡಿಯನ್ನು ಪ್ರತಿಭಟನೆಯನ್ನು ನಿಯಂತ್ರಿಸಲು ಕಳುಹಿಸಿದೆ. ಆದರೆ ಪಂಜಾಬ್‌ನ ಪೋಲೀಸರಿಗೂ ಮತ್ತು ಗಿಲ್ಗಿಟ್‌ನ ಪೋಲೀಸರಿಗೂ ಪ್ರತಿಭಟನೆಯ ವಿಷಯದಲ್ಲಿ ಘರ್ಷಣೆ ನಡೆಯುತ್ತಿದೆ.

ಒಟ್ಟಿನಲ್ಲಿ ಗಿಲ್ಗಿಟ್‌ನ ಈ ನಡೆ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿರುವದಂತೂ ಸತ್ಯ.

Share This Article
Leave a comment