ಚೀನಾದ ಸಹಾಯದಿಂದ ಮತ್ತೆ 370 ನೇ ವಿಧಿ ಜಾರಿ – ಫಾರೂಕ್ ಅಬ್ದುಲ್ಲಾ

Team Newsnap
1 Min Read

ಚೀನಾದ ಬೆಂಬಲ ಪಡೆದು ಜಮ್ಮು ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಜಾರಿಗೆ ತರುವ ಆಶಯವನ್ನು ಹೊಂದಿದ್ದೇನೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಫಾರುಕ್, ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾದಿಂದಲೇ ಲಡಾಖ್‍ನ ವಾಸ್ತವ ಗಡಿ ರೇಖೆ(ಎಲ್‍ಎಸಿ)ಯ ಬಳಿ ಚೀನಾ ಆಕ್ರಮಣ ಮಾಡುತ್ತಿದೆ ಎಂದು ಹೇಳಿದ್ದಾರೆ.

370ನೇ ವಿಧಿ ರದ್ದತಿಯನ್ನು ಚೀನಾ ಒಪ್ಪಿಕೊಂಡಿಲ್ಲ. ಹೀಗಾಗಿ ಚೀನಾದ ಬೆಂಬಲದಿಂದಾಗಿ 370ನೇ ವಿಧಿಯನ್ನು ಮತ್ತೆ ಜಾರಿಗೆ ತರುವ ಆಶಯ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಯಾವುದೇ ಉದ್ವಿಗ್ನ ಪರಿಸ್ಥಿತಿ ಏನಿದೆಯೋ ಇದಕ್ಕೆಲ್ಲಾ 370ನೇ ವಿಧಿ ರದ್ದತಿಯೇ ಕಾರಣ . ಚೀನಾ ಈ ನಿರ್ಧಾರವನ್ನು ಎಂದಿಗೂ ಸಮ್ಮತಿಸಿರಲಿಲ್ಲ. ಚೀನಾದ ಸಹಾಯದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಪುನಃಸ್ಥಾಪಿಸಲಾಗುವುದು ಎಂದು ನಾನು ಭಾವಿಸುತ್ತೇನೆ ಎಂದರು.

370 ನೇ ವಿಧಿ ರದ್ದಾದ ತಕ್ಷಣ ಜಮ್ಮು ಮತ್ತು ಕಾಶ್ಮೀರದ ಉನ್ನತ ರಾಜಕಾರಣಿಗಳೆಲ್ಲರನ್ನು ಗೃಹಬಂಧನದಲ್ಲಿರಿಸಲಾಗಿತ್ತು. ಫಾರೂಕ್ ಅಬ್ದುಲ್ಲಾ, ಅವರ ಪುತ್ರ ಮತ್ತು ಮಾಜಿ ಸಿಎಂ ಒಮರ್ ಅಬ್ದುಲ್ಲಾ, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಸೇರಿದಂತೆ ಎಲ್ಲ ರಾಜಕಾರಣಿಗಳನ್ನು 370 ನೇ ವಿಧಿ ರದ್ದಾದ ನಂತರ ಬಂಧನದಲ್ಲಿಡಲಾಗಿತ್ತು. ಫಾರೂಕ್ ಅಬ್ದುಲ್ಲಾ ಪ್ರಸ್ತುತ ಶ್ರೀನಗರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಕೇಂದ್ರ ಸರ್ಕಾರದಲ್ಲಿ ಸಹ ಬಹುಕಾಲ ಸೇವೆ ಸಲ್ಲಿಸಿದ್ದರು.

ಪ್ರಧಾನಿ ಮೋದಿ ಚೀನಾದ ಅಧ್ಯಕ್ಷರನ್ನು ಆಹ್ವಾನಿಸಿದ್ದಾರೆ ಹೊರತು ನಾನೆಂದೂ ಚೀನಾ ಅಧ್ಯಕ್ಷರನ್ನು ಭಾರತಕ್ಕೆ ಕರೆದಿಲ್ಲಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಚೀನಾ ಅಧ್ಯಕ್ಷರನ್ನು ಭಾರತಕ್ಕೆ ಆಹ್ವಾನಿಸಿದ ವ್ಯಕ್ತಿ ಪಿಎಂ ನರೇಂದ್ರ ಮೋದಿ. ಅವರು ಚೀನಾದ ಅಧ್ಯಕ್ಷರನ್ನು ರತ್ನಗಂಬಳಿ ಹಾಕಿ ಸ್ವಾಗತಿಸಿದ್ದರು.

ಅವರೊಂಡನೆ ಚೆನ್ನೈ ಸುತ್ತಿದ್ದರು. ಆದರೆ ನಾನೊಬ್ಬ ಸಂಸದರಾಗಿದ್ದರೂ . ಅಧಿವೇಶನದಲ್ಲಿ ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗಳ ಕುರಿತು ಮಾತನಾಡಲು ನನಗೆ ಅವಕಾಶ ನೀಡಿಲ್ಲವೆಂದು ಅವರು ಆರೋಪಿಸಿದ್ದಾರೆ.

Share This Article
Leave a comment