January 28, 2026

Newsnap Kannada

The World at your finger tips!

ere gowdana halli

ಪಾಂಡವಪುರದಲ್ಲಿಅಮಾನವೀಯ ಘಟನೆ: ಆಸ್ತಿ ಕೇಳಿದ್ದಕ್ಕೆ ಮಗನ ಮೇಲೆ ಮಾರಣಾಂತಿಕ ಹಲ್ಲೆ

Spread the love

ಆಸ್ತಿ ವಿಚಾರ ಮಗನನ್ನೇ ಕಟ್ಟಿಹಾಕಿ ತಂದೆಯಿಂದ ಹಲ್ಲೆ ಮಾಡಿದ ಘಟನೆ ಪಾಂಡವಪುರ ತಾಲೂಕು
ಎರೇಗೌಡನ ಹಳ್ಳಿ ಗ್ರಾಮದಲ್ಲಿ ಅಮಾನವೀಯ ಘಟನೆ ಜರುಗಿದೆ.

ಎರೇಗೌಡನಹಳ್ಳಿ ಹಲ್ಲೆಗೊಳಗಾದ ನಾಗೇಶ್ ಎಂಬ ವ್ಯಕ್ತಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ, ನಾಗೇಶ್, ತಂದೆ ಹಾಗೂ ಕುಟುಂಬಸ್ಥರಿಂದಲೇ‌ ಹಲ್ಲೆಗೊಳಗಾದ ವ್ಯಕ್ತಿ.

ತಂದೆಯ ಬಳಿ ಆಸ್ತಿಯಲ್ಲಿ ಭಾಗ ಕೇಳಿದ್ದಕ್ಕೆ ‌ಹಲ್ಲೆ ಮಾಡಿದ ತಂದೆ ಮಹದೇವೇಗೌಡ ಹಾಗೂ ತಮ್ಮ ನಂಜುಂಡೇಗೌಡ ಸೇರಿದಂತೆ ಕುಟುಂಬಸ್ಥರಿಂದ ಹಲ್ಲೆ ನಡೆದಿದೆ, ಮಾರಣಾಂತಿಕ ಹಲ್ಲೆ ನಡೆಸಿ ಆತನ ಕೈ ಕಾಲು ಕಟ್ಟಿ ಹಾಕಿ ಮನೆಯ ಬಳಿ ಕಟ್ಟಿ ಹಾಕಿದ್ದರು.

ಮನೆಗೆ ಹೋಗಿ ಆಸ್ತಿ ವಿಚಾರವಾಗಿ ಮಾತನಾಡಿ ಬರುವುದಾಗಿ ಹೇಳಿ ಹೋಗಿದ್ದ ಗಂಡ ನಾಗೇಶ್
ವಾಪಸ್ಸು ಬರದಿದ್ದಾಗ ಪತ್ನಿ ಸ್ಥಳಕ್ಕೆ ತೆರಳಿ ನೋಡಿದಾಗ ಗಂಡನ ಸ್ಥಿತಿ ಕಂಡು ಕಂಗಾಲಾಗಿ ಪೊಲೀಸರಿಗೆ ಪತ್ನಿ ಭಾರತಿ ದೂರು ನೀಡಿದ್ದಾರೆ.

ದೂರು ಪಡೆದು ಸ್ಥಳಕ್ಕೆ ಬಂದ ಪೊಲೀಸರಿಂದ ಹಲ್ಲೆಗೊಳಗಾದ ಗಂಡನ ರಕ್ಷಣೆ, ಆಸ್ಪತ್ರೆಗೆ ರವಾನೆ.
ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!