February 21, 2026

Newsnap Kannada

The World at your finger tips!

vishnu priya

ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ದಂಧೆ ಮಾಡುತ್ತಿದ್ದ ಕೇರಳದ LOVERS ಬಂಧನ

Spread the love

ಐಷಾರಾಮಿ ಜೀವನಕ್ಕಾಗಿ ಹಣ ಇಲ್ಲದೇ ಡ್ರಗ್ಸ್ ದಂಧೆ ಮಾಡುತ್ತಿದ್ದ ಪ್ರೇಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿಗಿಲ್ ವರ್ಗಿಸ್ ಮತ್ತು ವಿಷ್ಣುಪ್ರಿಯ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ 8 ಕೋಟಿ ರೂ. ಮೌಲ್ಯದ ವಿವಿಧ ರೀತಿಯ ಡ್ರಗ್ಸ್‌ಗಳನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿ ಮಾಲು ವಶ ಪಡಿಸಿಕೊಂಡರು.

ಸಿಗಿಲ್ ವರ್ಗಿಸ್ ಮತ್ತು ವಿಷ್ಟುಪ್ರಿಯ ವಿದ್ಯಾಭ್ಯಾಸಕ್ಕಾಗಿ ಕೇರಳದಿಂದ ಬೆಂಗಳೂರಿಗೆ ಬಂದಿದ್ದರು. ಆದರೆ ಡ್ರಗ್ಸ್ ಸೇವನೆ ಚಟಕ್ಕೆ ಬಿದ್ದಿದ್ದ ಇಬ್ಬರು ಪ್ರೇಮಿಗಳು ಐಷಾರಾಮಿ ಜೀವನ ನಡೆಸಲು ಪೆಡ್ಲಿಂಗ್ ದಂಧೆ ಶುರು ಮಾಡಿದ್ದಾರೆ.

ಕೇರಳ ಮತ್ತು ತಮಿಳುನಾಡಿನ ಕೊಯಮತ್ತೂರಿನಿಂದ ಡ್ರಗ್ಸ್ ತರಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಡ್ರಗ್ಸ್ ಮಾರಾಟ ಮಾಡುತ್ತಿದ್ದರು.

ಪೊಲೀಸರಿಗೆ ಈ ದಂಧೆಯ ಅಧಿಕೃತ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ದಾಳಿ ನಡೆಸಿ, ಇಬ್ಬರುಪ್ರೇಮಿಗಳನ್ನು ಬಂಧಿಸಿದ್ದಾರೆ.

error: Content is protected !!