ಕೊರೊನಾದಿಂದ ಮೃತರಾದ ರೈತರ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಸಹಕಾರ ಸಚಿವ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಮುನಿರಾಜುಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಸಾಲಮನ್ನಾ ಸಾಧ್ಯವಿಲ್ಲ ಎಂದಿದ್ದಾರೆ.
ಕೋವಿಡ್‍ನಿಂದ ಮೃತರಾದ ರೈತರ ಸಾಲಮನ್ನಾ ಮಾಡಬೇಕು. ಈಗಾಗಲೇ ರೈತರ ಮನೆಯಲ್ಲಿ ದೀಪ ಹಾರಿ ಹೋಗಿದೆ. ಹೀಗಾಗಿ ಸರ್ಕಾರ ಕೊರೊನಾದಿಂದ ಮೃತರಾದ ರೈತರ ಸಾಲಮನ್ನಾ ಮಾಡಬೇಕು ಎಂದು ಬಿಜೆಪಿ ಸದಸ್ಯ ಮುನಿರಾಜುಗೌಡ ಒತ್ತಾಯ ಮಾಡಿದರು.
ಸಚಿವ ಸೋಮಶೇಖರ್ ಉತ್ತರ ನೀಡಿ ರಾಜ್ಯದಲ್ಲಿ 1-2 ಕೊರೊನಾ ಅಲೆಯಲ್ಲಿ ಮೃತಪಟ್ಟ ರೈತರ ಪೈಕಿ 10,437 ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮತ್ತು ಗ್ರಾಮೀಣಾಭಿವೃದ್ಧಿ ಗಳಲ್ಲಿ ಸಾಲ ಪಡೆದಿರುತ್ತಾರೆ. ಮೃತರಾದ ರೈತರ ಸಾಲದ ಮೊತ್ತ 91.97 ಕೋಟಿ ಇದೆ ಅಂತ ಮಾಹಿತಿ ನೀಡಿದರು.
ಕೊರೊನಾದಿಂದ ಮೃತರಾದ ರೈತರು ಸಹಕಾರ ಸಂಘಗಳಲ್ಲಿ ಪಡೆದಿದ್ದ ಸಾಲಮನ್ನಾ ಮಾಡುವ ಆದೇಶ ಇಲಾಖೆ ಹೊರಡಿಸಿಲ್ಲ. ಕೊರೊನಾದಿಂದ ಮೃತಪಟ್ಟ ರೈತರು ಸೇರಿದಂತೆ ಎಲ್ಲಾ ಕುಟುಂಬಕ್ಕೆ 1.5 ಲಕ್ಷ ಆರ್ಥಿಕ ಸಹಾಯ ಸರ್ಕಾರದಿಂದ ಮಾಡಲಾಗಿದೆ. ರೈತರು ಸಾಲ ಮರುಪಾವತಿ ಮಾಡಲು ಕಂತು ಅವಧಿ ವಿಸ್ತರಣೆ ಮಾಡಲಾಗಿದೆ. ಬಡ್ಡಿ ಸಹಾಯಧನವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಈ ಯೋಜನೆಯು ಕೊರೊನಾದಿಂದ ಮೃತಪಟ್ಟ ರೈತರ ವಾರಸುದಾರರಿಗೂ ಅನ್ವಯ ಆಗುತ್ತದೆ ಎಂದು ತಿಳಿಸಿದರು.
ಲಾಭದಲ್ಲಿರುವ ಡಿಸಿಸಿ ಬ್ಯಾಂಕ್‍ಗಳು ತಮ್ಮಲ್ಲಿರುವ ಹಣವನ್ನು ಮೃತ ರೈತ ಸಾಲಮನ್ನಾಗೆ ಬಳಕೆ ಮಾಡಲು ಓರಲ್ ಆಗಿ ಅನುಮತಿ ನೀಡಲಾಗಿದೆ ಎಂದರು.
ಜೂನ್ 1 ರ ತನಕ ಸಾಲ ಪಾವತಿಗೆ ಅವಕಾಶ :
ಸಹಕಾರಿ ಸಂಸ್ಥೆಗಳಲ್ಲಿ ಸಾಲ ಪಡೆದಿರುವ ರೈತರಿಗೆ ಜೂನ್ 1 ರ ತನಕ ಸಾಲ ಮರು ಪಾವತಿಗೆ ಅವಕಾಶ ನೀಡಿದೆ . ಸಾಲದ ಬಡ್ಡಿ ಸಹಾಯ ಧನ 134 ಕೋಟಿ ರುಗಳನ್ನು ಸರ್ಕಾರವೇ ಭರಿಸುತ್ತದೆ.
- ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
- ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ವಾರ ಭಾರೀ ಮಳೆಯ ಮುನ್ಸೂಚನೆ
- ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್
- ವಯನಾಡಿನ ನೂತನ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ
- ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ
- ಬಾರ್ ಲೈಸೆನ್ಸ್ಗೆ 20 ಲಕ್ಷ ಲಂಚದ ಬೇಡಿಕೆ – ಅಬಕಾರಿ ಡಿಸಿ ವಿರುದ್ಧ ಲೋಕಾಯುಕ್ತಕ್ಕೆ ದೂರು
More Stories
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ವಾರ ಭಾರೀ ಮಳೆಯ ಮುನ್ಸೂಚನೆ
ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್
ಬಾರ್ ಲೈಸೆನ್ಸ್ಗೆ 20 ಲಕ್ಷ ಲಂಚದ ಬೇಡಿಕೆ – ಅಬಕಾರಿ ಡಿಸಿ ವಿರುದ್ಧ ಲೋಕಾಯುಕ್ತಕ್ಕೆ ದೂರು