ರಷ್ಯಾ- ಉಕ್ರೇನ್ ನಡುವೆ ಭೀಕರ ಯುದ್ಧದ ಪರಿಣಾಮ ಭಾರತೀಯರು ತಾಯ್ನಾಡಿಗೆ ಮರಳುತ್ತಿದ್ದರೆ 21 ವರ್ಷದ ಭಾರತೀಯ (ತಮಿಳುನಾಡಿನ) ವಿದ್ಯಾರ್ಥಿ ಉಕ್ರೇನ್ ಸೇನೆಗೆ ಸೇರಿದ್ದಾನೆ
ತಮಿಳುನಾಡಿನ ಕೊಯಿಮತ್ತೂರು ಜಿಲ್ಲೆಯ 21 ವರ್ಷದ ಯುವಕ ಸೈನಿಕೇಶ್ ರವಿಚಂದ್ರನ್ ಉಕ್ರೇನ್ ಸೇನೆ ಸೇರಿದ್ದಾನೆಂಬ ಸುದ್ದಿ ಬಂದಿದೆ
ಉಕ್ರೇನ್ ಪ್ಯಾರಾ ಮಿಲಿಟರಿಗೆ ಸೇರಿ ರಷ್ಯಾ ವಿರುದ್ಧ ಹೋರಾಟ ಮಾಡುತ್ತಿದ್ದಾನೆ ಎನ್ನಲಾಗಿದೆ.
ಉಕ್ರೇನ್ ಬಿಕ್ಕಟ್ಟು ಬೆನ್ನಲ್ಲೇ ಅಧಿಕಾರಿಗಳು ತಮಿಳುನಾಡಿನಲ್ಲಿರುವ ಸೈನಿಕೇಶ್ ನಿವಾಸಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಪೋಷಕರನ್ನು ವಿಚಾರಿಸಿದ್ದಾರೆ. ಆಗ ಸೈನಿಕೇಶ್ ಭಾರತೀಯ ಆರ್ಮಿಗೆ ಸೇರಲು ಅರ್ಜಿ ಸಲ್ಲಿಸಿದ್ದರು. ಆದರೆ ಕಾರಣಾಂತರಗಳಿಂದ ಅದು ರಿಜೆಕ್ಟ್ ಆಗಿತ್ತು ಅನ್ನೋ ಮಾಹಿತಿ ಲಭ್ಯವಾಗಿದೆ.
2018ರಲ್ಲಿ ಸೈನಿಕೇಶ್ ಉಕ್ರೇನ್ಗೆ ವಿದ್ಯಾಭ್ಯಾಸಕ್ಕೆ ಹೋಗಿದ್ದ. ಖಾರ್ಕಿವ್ನ ನ್ಯಾಷನಲ್ ಏರೋಸ್ಪೇಸ್ ವಿವಿಯಲ್ಲಿ ಓದಲು ಉಕ್ರೇನ್ಗೆ ತೆರಳಿದ್ದ. ಅದರಂತೆ 2022ರಲ್ಲಿ ತಮ್ಮ ಕೋರ್ಸ್ ಅನ್ನ ಸೈನಿಕೇಶ್ ಮುಗಿಸಿದ್ದಾನೆ.
ಈ ನಡುವೆ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿತು. ಪರಿಣಾಮ ಅವರ ಕುಟುಂಬ ಸೈನಿಕೇಶ್ ಸಂಪರ್ಕವನ್ನ ಕಳೆದುಕೊಂಡಿತು. ಹೀಗಾಗಿ ಅವರು ವಿದೇಶಾಂಗ ಇಲಾಖೆ ಅಧಿಕಾರಿಗಳನ್ನು ಸಂಪರ್ಕ ಮಾಡಿದರು.
ನಂತರ ಸೈನಿಕೇಶ್ ಅವರನ್ನ ಸಂಪರ್ಕಿಸಲು ಸಾಧ್ಯವಾಗಿದೆ. ಈ ವೇಳೆ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಸೇನೆಗೆ ಸೇರಿಕೊಂಡಿರುವ ಮಾಹಿತಿಯನ್ನು ಕುಟುಂಬಕ್ಕೆ ತಿಳಿಸಿದ್ದಾನೆ.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ