2020ರ ಏಪ್ರಿಲ್ 24ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಾಮಿತ್ವ ಯೋಜನೆಯನ್ನು ಪರಿಚಯಿಸಿದ್ದಾರೆ. ಈಗ ಆ ಯೋಜನೆಯ ಮೂಲಕ ಹಳ್ಳಿಗಳಲ್ಲಿರುವ ಜನರಿಗೆ ಆಸ್ತಿ ಕಾರ್ಡ್ ವಿತರಿಸಲು ಮುಂದಾಗಿದ್ದಾರೆ. ಪ್ರಾರಂಭಿಕ ಹಂತವಾಗಿ ದೇಶದ 763 ಹಳ್ಳಿಗಳ 1,32,000 ಭೂ ಮಾಲೀಕರಿಗೆ ಕಾರ್ಡ್ ನೀಡಲು ನಿರ್ಧರಿಸಿದೆ ಕೇಂದ್ರ ಸರ್ಕಾರ.
ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ವರ್ಷಗಳಿಂದ ವಾಸ ಮಾಡಿರುವ ತಮ್ಮ ಜಾಗದ ದಾಖಲೆ ಹೊಂದಿರದವರಿಗೆ ಪಂಚಾಯತ್ ರಾಜ್ ಸಚಿವಾಲಯದ ಮೂಲಕ ಹಕ್ಕುಪತ್ರ ನೀಡುವ ನೂತನ ಚಿಂತನೆಯ ಯೋಜನೆ ಇದಾಗಿದೆ.
ಈಗ ಹಕ್ಕು ಪತ್ರಗಳನ್ನು ಆಸ್ತಿ ಕಾರ್ಡ್ ಮೂಲಕ ನೀಡುವ ಚಿಂತನೆ ನಡೆಸಲಾಗುತ್ತಿದೆ ಎಂದು ಇಂದು ನಡೆದ ಆನ್‌ಲೈನ್ ಕಾನ್ಫರೆನ್ಸ್ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಹೇಳಿದರು.
ಆಸ್ತಿಪತ್ರ ಅಥವಾ ಆಸ್ತಿಕಾರ್ಡ್ ಹೊಂದಿದ ಮಾಲೀಕರು ಇನ್ನು ಮುಂದೆ ಸರಳವಾಗಿ ಬ್ಯಾಂಕುಗಳಲ್ಲಿ ಅಥವಾ ಇತರೆ ಹಣಕಾಸು ಸಂಸ್ಥೆಗಳಲ್ಲಿ ಸಾಲವನ್ನು ಪಡೆಯಬಹುದಾಗಿದೆ. ಆಸ್ತಿಪತ್ರಗಳನ್ನು ವಿತರಣೆ ಮಾಡುವಾಗ ಪಂಚಾಯತ್ ರಾಜ್ ಸಚಿವಾಲಯದ ಅಧಿಕಾರಿಗಳು, ರಾಜ್ಯ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
ಪ್ರತೀ ಆಸ್ತಿಯನ್ನು ನೂತನ ತಂತ್ರಜ್ಞಾನವನ್ನು ಬಳಸಿ, ಡ್ರೋನ್ ಮೂಲಕ ಮ್ಯಾಪಿಂಗ್ ಸಹ ಮಾಡಲಾಗುವುದು. ಹಾಗೂ ಆಸ್ತಿ ಕಾರ್ಡ್‌ಗಳ ಭೌತಿಕ ಕಾರ್ಡ್‌ಗಳನ್ನು ವಿತರಿಸುವದಲ್ಲದೇ ಮಾಲೀಕರ ಮೊಬೈಲ್ ಸಂಖ್ಯೆಗೆ ಲಿಂಕ್ ಒಂದನ್ನು ಕಳಿಸಲಾಗುತ್ತದೆ. ಈ ಲಿಂಕ್ ಮೂಲಕವೂ ಆಸ್ತಿಕಾರ್ಡ್‌ಗಳನ್ನು ಡೌನ್‌ಲೊಡ್ ಮಾಡಿಕೊಳ್ಳಬಹುದಾಗಿದೆ.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ