January 29, 2026

Newsnap Kannada

The World at your finger tips!

cm1

ಶಾಲೆಗಳಿಗೆ ಮೂರು ವಾರ ರಜೆ ಘೋಷಿಸಿದ ಸಿಎಂ

Spread the love

ವಿದ್ಯಾಗಮ‌ ಕಾರ್ಯಕ್ರಮದ ಮೂಲಕ ಅನೇಕ ಶಿಕ್ಷಕರು ಕೊರೋನಾ ಸೋಂಕಿಗೆ ಒಳಪಟ್ಟ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಶಾಲೆಗಳಿಗೆ ಮೂರು ವಾರಗಳ ಕಾಲ ರಜೆ ಘೋಷಣೆ ಮಾಡಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಸಿಎಂ ‘ಕೋವಿಡ್ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲೆ ಪ್ರಾರಂಬಿಸದಿರುವಂತೆ ನಿರ್ಧರಿಸಲಾಗಿದೆ.

ಹಾಗೆಯೇ ವಿದ್ಯಾಗಮ ಕಾರ್ಯಮವನ್ನೂ ಸಹ ನಿಲ್ಲಿಸಲು ಆದೇಶ ನೀಡಲಾಗಿದೆ. ಮಾಧ್ಯಮಗಳ ಮೂಲಕ ಅನೇಕ ಶಿಕ್ಷಕರು ಕೋವಿಡ್ ಸೋಂಕಿಗೆ ಒಳಗಾಗುವುದನ್ನು ನಾನು ಗಮನಿಸಿರುವೆ. ಹಾಗಾಗಿ 12-10-2020 ರಿಂದ 30-10-2020 ವರೆಗೆ, ಮೂರು ವಾರಗಳ ಕಾಲ, ರಜೆಯನ್ನು ಘೋಷಣೆ ಮಾಡಿ ಆದೇಶ ಹೊರಡಿಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.’ ಎಂದು ಹೇಳಿದ್ದಾರೆ.

ಮುಂಚಿತವಾಗಿಯೇ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವೃಂದದವರಿಗೆ ದಸರಾ ಹಬ್ಬದ ಶುಭಾಶಯಗಳನ್ನೂ ಕೋರಿದ್ದಾರೆ.

error: Content is protected !!