ಮೂಗರ್ಜಿಗಳಿಗೆ ಇನ್ಮುಂದೆ ಮಾನ್ಯತೆ ಇಲ್ಲ – ಸಿ ಎಸ್

Team Newsnap
1 Min Read

ಸರ್ಕಾರದ ಅಧಿಕಾರಿಗಳ ವಿರುದ್ಧ ಇನ್ನು ಮುಂದೆ ಯಾವುದೇ ರೀತಿಯ ಮೂಗರ್ಜಿಗಳು, ಅನಾಮಧೇಯ ದೂರುಗಳು ಬಂದರೆ ಅವುಗಳನ್ನು ಪರಿಗಣಿಸಲಾಗುವುದಿಲ್ಲ‌ ಎಂದು ರಾಜ್ಯ ಸರ್ಕಾರ ಹೇಳಿದೆ. ಇದರಿಂದ ರಾಜ್ಯದ ಸರ್ಕಾರಿ ನೌಕರರಿಗೆ ದೊಡ್ಡ ನಿರಾಳತೆ ಸಿಕ್ಕಿದೆ

ಸರ್ಕಾರಿ‌ ಅಧಿಕಾರಿಗಳ ವಿರುದ್ಧ ಬರುವ ಅನಾಮಧೇಯ ದೂರುಗಳ ಪರಿಗಣಿಸುವಿಕೆಯನ್ನು ನಿಲ್ಲಿಸಿರುವಿಕೆಯ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ‘ಇನ್ನು‌‌ ಮುಂದೆ ಹೆಸರು, ವಿಳಾಸ ಇಲ್ಲದಿರುವ ದೂರುಗಳ ಪರಿಗಣನೆ ನಿಲ್ಲಿಸಲಾಗುವುದು. ವಿಳಾಸ ಇರುವ ದೂರುಗಳನ್ನು ಮಾತ್ರವೇ ಸ್ವೀಕರಿಸಬೇಕು. ಸೂಕ್ತ ದಾಖಲೆ ಇಲ್ಲದ ದೂರುಗಳ್ನು ಪರಿಗಣಿಸಬೇಡಿ. ಅಧಿಕಾರಿ, ನೌಕರರ ವಿರುದ್ಧದ ಅನಾಮಧೇಯ ದೂರುಗಳನ್ನು ಮಾನ್ಯ ಮಾಡಬಾರದು’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಸ್ವಹಿತಾಸಕ್ತಿಗಾಗಿ ಸಲ್ಲಿಸುವ ಅನಾಮಧೇಯ ದೂರುಗಳಿಗೆ, ಮೂಗರ್ಜಿಗಳಿಗೆ ಬ್ರೇಕ್ ಬೀಳಲಿದೆ.

Share This Article
Leave a comment