March 14, 2026

Newsnap Kannada

The World at your finger tips!

student jump

ಕಾಲೇಜ್​​ನಲ್ಲಿ ಡಿಬಾರ್ : ಕಟ್ಟಡದಿಂದ ಜಂಪ್ ಮಾಡಿ ವಿದ್ಯಾರ್ಥಿನಿ ಆತ್ಮಹತ್ಯೆ

Spread the love

ಕಾಲೇಜಿನಲ್ಲಿ ಡಿಬಾರ್ ಮಾಡಿದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಭವ್ಯ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಲೇಡಿಸ್ ಪಿಜಿ ಕಟ್ಟಡದ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ
ಮಾಡಿಕೊಂಡಿದ್ದಾಳೆ.

ಜ್ಯೋತಿ ನಿವಾಸ್ ಕಾಲೇಜಿನ ಬಿಕಾಂ ವಿದ್ಯಾರ್ಥಿನಿಯಾಗಿದ್ದಾಳೆ. ಈ ವೇಳೆ
ಭವ್ಯ, ಪರೀಕ್ಷೆ ವೇಳೆ ಕಾಪಿ ಮಾಡುತ್ತಿದ್ದಾಳೆಂದು ಕಾಲೇಜು ಆಡಳಿತ ಮಂಡಳಿ ಡಿಬಾರ್ ಮಾಡಿತ್ತಂತೆ.

ತನ್ನನ್ನ ಡಿಬಾರ್ ಮಾಡಿದ್ದಾರೆ, ಹೀಗಾಗಿ ನಾನು ಬದುಕೋದಿಲ್ಲ ಎಂದು ಸಹೋದರಿ ದಿವ್ಯಾಗೆ ಕರೆ ಮಾಡಿದ್ದಳು.

ಈ ವಿಚಾರವನ್ನು ಸಹೋದರಿ ತಂದೆಗೆ ತಿಳಿಸಿದ್ದಳು. ಅಷ್ಟರೊಳಗೆ ಭವ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರಿನ ಜೀವನ ಭೀಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!