December 27, 2024

Newsnap Kannada

The World at your finger tips!

petrol

ಬ್ಯಾರಲ್ ಗೆ 116 ಡಾಲರ್ ಕಚ್ಚಾ ತೈಲ ದರ – ಭಾರತದಲ್ಲಿ ಪೆಟ್ರೋಲ್ ದರ ಏರಿಕೆ ಸಾಧ್ಯತೆ

Spread the love

ಉಕ್ರೇನ್ ಮತ್ತು ರಷ್ಯಾ ಭೀಕರ ಯುದ್ದದಿಂದ ಭಾರತದಲ್ಲಿ ಕಚ್ಚಾ ತೈಲದ ದರ ಏರಿಕೆಯಾಗುವ ಸಾಧ್ಯತೆ ಇದೆ.

ಈ ಯುದ್ಧದಿಂದ ದಾಖಲೆ ಮಟ್ಟದಲ್ಲಿ ಕಚ್ಚಾ ತೈಲದ ದರ​ ಏರಿಕೆಯಾಗುತ್ತಿದೆ. ಇನ್ನು ತೈಲ ಉತ್ಪಾದನೆಯಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ರಾಷ್ಟ್ರ ರಷ್ಯಾ ಆಗಿದೆ. ವಿಶ್ವದಲ್ಲಿ ಶೇಕಡಾ 10ರಷ್ಟು ತೈಲ ಉತ್ಪಾದನೆ ರಷ್ಯಾದಲ್ಲಿ ಆಗುತ್ತಿದೆ.

9 ವರ್ಷಗಳಲ್ಲೇ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಯುದ್ಧದಿಂದಾಗಿ ಬ್ಯಾರೆಲ್​ಗೆ 116 ಡಾಲರ್​ ಕಚ್ಚಾತೈಲ ದರ ತಲುಪಿದೆ.

ಇನ್ನು ಯುದ್ಧ ಮುಂದುವರಿದರೆ ಪೆಟ್ರೋಲ್ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಇದರ ನೇರ ಎಫೆಕ್ಟ್​ ಭಾರತದ ತೈಲ ದರದ ಮೇಲೂ ಬೀಳುವ ಸಾಧ್ಯತೆ ಇದೆ.

ನವೆಂಬರ್​ನಿಂದಲೂ ಭಾರತದಲ್ಲಿ ಯಾವುದೆ ರೀತಿಯ ಬದಲಾವಣೆ ಕಾಣದ ಪೆಟ್ರೋಲ್ ದರ ಇದೀಗ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಬಹುದು.

ಆದರೆ ಈ ಯುದ್ದದ ಪರಿಣಾಮವಾಗಿ ಕೆಲವೇ ದಿನಗಳಲ್ಲಿ ​ ಪೆಟ್ರೋಲ್ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Copyright © All rights reserved Newsnap | Newsever by AF themes.
error: Content is protected !!