ಬೀದಿ ಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದ ಸಾಲ

Team Newsnap
1 Min Read

ಬೀದಿ ಬದಿಯ ಹಾಗೂ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಸಹಾಯಕ್ಕೆಂದು ರಾಜ್ಯ ಸರ್ಕಾರವು ಪ್ರಸ್ತುತ ಪಡಿಸಿರುವ ಬಡವರ ಬಂಧು‌ ಯೋಜನೆಗೆ ಅಧಿಕೃತ ಚಾಲನೆ ದೊರೆತಿದೆ.
ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿನ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿದರದಲ್ಲಿ ಕಿರು ಸಾಲ ನೀಡುವ ಯೋಜನೆ ಇದಾಗಿದೆ.

‘ಯೋಜನೆಯು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಾರಿಯಾಗಿದೆ. ನೊಂದಾಯಿತ ಬೀದಿ ಬದಿಯ ಹಾಗೂ ಸಣ್ಣ ವ್ಯಾಪಾರಿಗಳು ಡಿಸಿಸಿ ಬ್ಯಾಂಕ್, ಪಟ್ಟಣ ಸಹಕಾರಿ ಬ್ಯಾಂಕ್, ಮಹಿಳಾ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಪಡೆಯಬಹುದು’ ಎಂದು ಸಹಕಾರ ಇಲಾಖೆಯ ಪದನಿಮಿತ್ತ ಜಂಟಿ ಕಾರ್ಯದರ್ಶಿ ಮತ್ತು ವಿಶೇಷ ಕರ್ತವ್ಯಾಧಿಕಾರಿ ಕೆ.ಎಂ. ಆಶಾ ಆದೇಶ ಹೊರಡಿಸಿದ್ದಾರೆ.

ಬೀದಿ ಬದಿ‌ ಆಟೋಗಳಲ್ಲಿ ಆಹಾರ ಮಾರಾಟ ಮಾಡುವವರು, ರಸ್ತೆ ಬದಿಯ ತಳ್ಳು ಬಂಡಿ ವ್ಯಾಪಾರಿಗಳು, ಮನೆ ಮನೆಗೆ ಹೋಗಿ ಹೂವು ತರಕಾರಿ ಮಾರುವ ವ್ಯಾಪಾರಸ್ಥರು, ಗೃಹಪಯೋಗಿ ವಸ್ತುಗಳ, ಆಟಿಕೆಗಳ ಮಾರಾಟಗಾರರು, ಚರ್ಮದ ವ್ಯಾಪಾರಿಗಳು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.

Share This Article
Leave a comment