December 19, 2024

Newsnap Kannada

The World at your finger tips!

ದಾವೂದ್

ದಾವೂದ್ ಇಬ್ರಾಹಿಂ ಜೊತೆ ಸಂಪರ್ಕ – ಮಹಾರಾಷ್ಟ್ರ ಮಂತ್ರಿ ನವಾಬ್ ಮಲಿಕ್ ಬಂಧನ

Spread the love

ಮಹಾರಾಷ್ಟ್ರ (Maharashtra) ಸಚಿವ, ಎನ್​​ಸಿಪಿ ನಾಯಕ ನವಾಬ್ ಮಲಿಕ್  ಅವರನ್ನು ಇಡಿ ಪೊಲೀಸರು ಬಂಧಿಸಿದ್ದಾರೆ.

ಭೂಗತ ಜಗತ್ತಿನ ​​ ಡಾನ್​​ ದಾವೂದ್ ಇಬ್ರಾಹಿಂ, ಡಿ-ಗ್ಯಾಂಗ್​ನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಮಹಾರಾಷ್ಟ್ರ ಸಚಿವರನ್ನು ಬಂಧಿಸಿದೆ

ಇಂದು ಬೆಳಗ್ಗೆಯಿಂದಲೇ ಡಿ-ಗ್ಯಾಂಗ್​ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನವಾಬ್ ಮಲಿಕ್​​ರನ್ನು ಇಡಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದರು.

Nawab Malik

ಅಕ್ರಮ ನಗದು ವರ್ಗಾವಣೆ ಕಾನೂನು ಅನ್ವಯ ಹೇಳಿಕೆಯನ್ನು ಪಡೆದುಕೊಂಡಿದೆ.

ಬಂಧನಕ್ಕೆ ​ ಪ್ರತಿಕ್ರಿಯೆ ನೀಡಿರುವ ಮಲಿಕ್, ನಾನು ಭಯಗೊಂಡಿಲ್ಲ. ನನ್ನ ಹೋರಾಟ ಮುಂದುವರಿಯುತ್ತದೆ. ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವಾಬ್​ ಮಲಿಕ್ ಅರೆಸ್ಟ್ ಕುರಿತಂತೆ ಮಹಾರಾಷ್ಟ್ರ ಎನ್​​ಸಿಪಿ, ಶಿವಸೇನೆ ನಾಯಕರು ಸೇರಿದಂತೆ ಹಲವು ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ,

ಸಂಸದ ಸಂಜಯ್​ ರಾವತ್ ಮಾತನಾಡಿ, ಮಲಿಕ್​ ಕ್ಯಾಬಿನೇಟ್​ ಸಚಿವ, ಹಿರಿಯ ನಾಯಕ, ನೋಟಿಸ್ ಕೂಡ ನೀಡದೇ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಕೇಂದ್ರ ಸರ್ಕಾರ ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. 2024ರ ಬಳಿಕ ಬಿಜೆಪಿ ನಾಯಕರಿಗೂ ಇದೇ ಸ್ಥಿತಿ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.

ಆರೋಪಿಗಳು ಹರ್ಷನ ಕೊಲೆಗೆ 2016ರಿಂದಲೇ ಸ್ಕೆಚ್ ಹಾಕಿದ್ದರು : ಪೋಲಿಸರ ತನಿಖೆಯಿಂದ ಬಹಿರಂಗ

ಹರ್ಷ ಹಾಗೂ ಖಾಸಿಫ್ ನಡುವೆ ಹಲವು ಬಾರಿ ತಿಕ್ಕಾಟ ನಡೆದಿರುವ ಕಾರಣಕ್ಕಾಗಿ ಹಿಂದೂ ಕಾರ್ಯಕರ್ತ ಹರ್ಷನ ಮೇಲೆ 2016 ಮತ್ತು 2017ರಿಂದಲೇ ಕಣ್ಣಿಟ್ಟಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ

ಧಾರ್ಮಿಕ ಭಾವನೆಗೆ ಧಕ್ಕೆ ತಂದು ಕೋಮು ಸೌಹಾರ್ದವನ್ನು ಹಾಳು ಮಾಡಲಾಗುತ್ತಿದೆ ಎಂಬ ಕೇಸ್ ಆದಾಗಿಂದ ಹರ್ಷ ವಿರುದ್ಧ ಖಾಸಿಫ್ ದ್ವೇಷ ಸಾಧಿಸುತ್ತಿದ್ದರು.

ಆಗ ಹರ್ಷ ವಿರುದ್ಧ ಎರಡು ಕೇಸ್‍ಗಳನ್ನು ಸಹ ಪೊಲೀಸರು ಹಾಕಿದ್ದರು. ಈ ನಡುವೆ 2020ರಲ್ಲಿ ಜೈಲಿನಲ್ಲಿ ಒಮ್ಮೆ ಹರ್ಷ ಮತ್ತು ಖಾಸಿಫ್ ಗಲಾಟೆ ಮಾಡಿಕೊಂಡಿದ್ದರು.

ಆನಂತರ ಕೆಲ ತಿಂಗಳ ಹಿಂದೆ ಕೋರ್ಟ್ ಬಳಿ ಹಾಗೂ ಹೋಟೆಲ್ ಮುಂದೆ ಗಲಾಟೆ ಮಾಡಿಕೊಂಡಿದ್ದರು.

ಬಳಿಕ ಹರ್ಷನನ್ನು ಹೊಡೆಯಬೇಕು ಎಂದು ಖಾಸಿಫ್ ತೀರ್ಮಾನ ಮಾಡಿದ್ದ. ಆದರೆ ಯಾವತ್ತು ಹೊಡೆಯಬೇಕು ಎಂಬುದು ತೀರ್ಮಾನ ಆಗಿರಲಿಲ್ಲ.

ಖಾಸಿಫ್ ಮತ್ತು ಆತನ ಸಹಚರರಿಗೆ ಹರ್ಷ ಚಲನವಲನದ ಬಗ್ಗೆ ನಿಗಾ ಇಡುವಂತೆ ತಿಳಿಸಿದ್ದ. ಕಳೆದ ಎರಡು ತಿಂಗಳಿಂದ ಹರ್ಷನನ್ನು ಆರೋಪಿಗಳು ಗಮನಿಸುತ್ತಿದ್ದರು.

ಹರ್ಷ ಎಲ್ಲಿ ಹೋಗ್ತಾನೆ, ಎಲ್ಲಿ ಬರ್ತಾನೆ ಯಾವಾಗ ಒಂಟಿ ಆಗಿರುತ್ತಾನೆ ಎನ್ನುವ ಮಾಹಿತಿಯನ್ನು ಕಲೆ ಹಾಕಿದ್ದರು.

ಹಿಜಬ್ ಗಲಾಟೆ ನಂತರ ಹರ್ಷನ ಮೇಲೆ ಮತ್ತಷ್ಟು ದ್ವೇಷ ಕಟ್ಟಿಕೊಂಡಿದ್ದ ಇವರು, ಕೃತ್ಯ ನಡೆದ ದಿನ ಹರ್ಷ ಒಬ್ಬನೇ ಇರುವುದು ಆರೋಪಿಗಳ ಕಣ್ಣಿಗೆ ಬಿದ್ದಿತ್ತು.

ಯಾವಾಗಾದರೂ ಹೊಡೆಯಬೇಕು ಎಂದು ತೀರ್ಮಾನ ಮಾಡಿದ್ದ ಆರೋಪಿಗಳಿಗೆ ಹರ್ಷ ಒಂಟಿಯಾಗಿ ಸಿಕ್ಕಿ ಹಾಕೊಂಡಿದ್ದ. ಯಾವಾಗಲೂ ಚಾಕು ಡ್ಯಾಗರ್‍ಗಳನ್ನು ತಮ್ಮ ವಾಹನದಲ್ಲಿ ಇಟ್ಟುಕೊಳ್ಳುತ್ತಿದ್ದ ಆರೋಪಿಗಳು, ಹರ್ಷ ಸಿಕ್ಕಾಗ ಇವನದು ಜಾಸ್ತಿ ಆಗಿದೆ ಮುಗಿಸಿ ಬಿಡುವ ಎಂದು ಅಟ್ಯಾಕ್ ಮಾಡಿದ್ದಾರೆ. ಅಟ್ಯಾಕ್ ಮಾಡಿದವರ ಪೈಕಿ ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!